ರಾಜ್ಯಾದ್ಯಂತ ನಿಲ್ಲದ ವಕ್ಫ್ ಗುಮ್ಮ, ನಾಳೆ ನಿಮ್ಮ ಮನೆ-ಜಮೀನಿಗೂ ಬರಬಹುದು ನೋಟಿಸ್!
ರಾಜ್ಯಾದ್ಯಂತ ವಕ್ಫ್ ಬೋರ್ಡ್ ಗುಮ್ಮ ಮುಂದುವರಿದಿದೆ. ವಿಜಯಪುರ ಬಳಿಕ ಧಾರವಾಡ ರೈತರಿಗೂ ನೋಟಿಸ್ ನೀಡಲಾಗಿದೆ. ಇನ್ನು ಮೂವರು ಸಚಿವರು ಇದನ್ನ ಸಮರ್ಥನೆ ಮಾಡಿಕೊಂಡಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಅ.28): ರಾಜ್ಯಾದ್ಯಂತ ವಕ್ಫ್ ಬೋರ್ಡ್ ಗುಮ್ಮ ಮುಂದುವರಿದಿದೆ. ಪರಿಸ್ಥಿತಿ ಯಾವ ಹಂತಕ್ಕೆ ಹೋಗಿದೆ ಎಂದರೆ, ನಾಳೆ ನೀವಿರುವ ಮನೆ, ಜಮೀನಿನ ಬಗ್ಗೆಯೂ ವಕ್ಫ್ ಮಂಡಳಿ ಏಕಾಏಕಿ ನೋಟಿಸ್ ನೀಡುವ ಸಾಧ್ಯತೆ ಇದೆ.
ದೊಡ್ಡ ಮಟ್ಟದ ಹೋರಾಟಕ್ಕೆ ಬಿಜೆಪಿ ಪಡೆ ನಿರ್ಧಾರ ಮಾಡಿದೆ. ಉತ್ತರ ಕರ್ನಾಟಕದ ರೈತರ ಕಷ್ಟವನ್ನ ಆಲಿಸಲು ಬಿಜೆಪಿ ನಾಯಕರ ತಂಡ ರಚನೆ ಮಾಡಲಾಗಿದೆ. ನಾಳೆ ವಿಜಯಪುರಕ್ಕೆ ಬಿಜೆಪಿ ನಿಯೋಗ ಭೇಟಿ ನೀಡಿ ಪರಿಶೀಲನೆ ನಡಡೆಸಲಿದ್ದಾರೆ.
ಇಲ್ಲಿ ಆಸ್ತಿ ಮಾಡೋಕೆ ಅಲ್ಲಾ ಏನು ಭಾರತದವನಾ? ನೋಟೀಸ್ ಕೊಡೋಕೆ ಇವರಪ್ಪನ ಮನೆ ಆಸ್ತೀನಾ? ಪ್ರಹ್ಲಾದ್ ಜೋಶಿ!
ಉಚಿತ ಕಾನೂನು ನೆರವು ನೀಡುವುದಾಗಿ ವಿಜಯಪುರ ರೈತರಿಗೆ ಶಾಸಕ ಬಸನಗೌಡ ಯತ್ನಾಳ್ ಅಭಯ ನೀಡಿದ್ದಾರೆ. ವಕ್ಫ್ ನೋಟಿಸ್ ಪಡೆದ ರೈತರ ಪರವಾಗಿ ಕೋರ್ಟ್‌ನಲ್ಲಿ ವಾದ ಮಾಡಲಾಗುತ್ತದೆ. ವಕೀಲರ ತಂಡ ರಚನೆಗೆ ಬಸನಗೌಡ ಯತ್ನಾಳ್ ಮುಂದಾಗಿದ್ದಾರೆ.