Karnataka Election: ಗಡಿನಾಡು ಬಳ್ಳಾರಿಯಲ್ಲಿ ನರೇಂದ್ರ ಮೋದಿ, ಶ್ರೀರಾಮುಲು ಪ್ರಚಾರ

ಗಣಿನಾಡು ಬಳ್ಳಾರಿಗೆ ಪ್ರಧಾನಿ ಮೋದಿ ಆಗಮನ
ಬಳ್ಳಾರಿಯ 5 ಕ್ಷೇತ್ರ ಗೆಲ್ಲಲು ಮೋದಿ ಪ್ಲ್ಯಾನ್‌
ಕದನ ಕಣದಲ್ಲಿ ಪ್ರಧಾನಿ ಮೋದಿಯ ಕೊನೆ ಆಟ
 

First Published May 5, 2023, 6:00 PM IST | Last Updated May 5, 2023, 6:00 PM IST

ಬಳ್ಳಾರಿ: ಇಂದು ಜಿಲ್ಲೆಯಲ್ಲಿ ಬಿಜೆಪಿ ಬೃಹತ್ ಸಮಾವೇಶವನ್ನು ಆಯೋಜಿಸಿತ್ತು. ಈ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿ ಅಬ್ಬರದ ಪ್ರಚಾರ ಮಾಡಿದ್ರು. ಈ ಮೂಲಕ ಬಳ್ಳಾರಿಯ 5 ಕ್ಷೇತ್ರ ಗೆಲ್ಲಲು ಮೋದಿ ಮಾಸ್ಟರ್‌ ಪ್ಲಾನ್‌ ಮಾಡಿದ್ದಾರೆ. ಈ ಸಮಾವೇಶದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಬಳ್ಳಾರಿಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕು. ಪ್ರಧಾನಿ ಮೋದಿಯವರು ಸುಮಾರು 9 ಸಾವಿರ ಜನೌಷಧಿ ಕೇಂದ್ರಗಳನ್ನು ಬಡವರಿಗಾಗಿ ಆರಂಭಿಸಿದ್ದಾರೆ. ಇದರಿಂದ ಬಡವರ 20 ಸಾವಿರ ಕೋಟಿ ರೂಪಾಯಿ ಉಳಿತಾಯವಾದಂತೆ ಆಗಿದೆ. ಕಾಂಗ್ರೆಸ್‌ನ ಅವಧಿಯಲ್ಲಿ ಬಡವರಿಗೆ ತಲುಪಬೇಕಾದ ಎಲ್ಲಾ ಯೋಜನೆಗಳನ್ನು ನುಂಗಿ ನೀರು ಕುಡಿಯಲಾಯಿತು ಎಂದು ಕಾಂಗ್ರೆಸ್‌ ವಿರುದ್ಧ ಶ್ರೀರಾಮುಲು ವಾಗ್ದಾಳಿ ನಡೆಸಿದರು.

ಇದನ್ನೂ ವೀಕ್ಷಿಸಿ: ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಭರ್ಜರಿ ಪ್ರಚಾರ: ಪತ್ನಿ, ಪುತ್ರಿ ಬ್ರಹ್ಮಿಣಿ ಜತೆ ರೋಡ್‌ ಶೋ

Video Top Stories