'ಯಾರ ಹೆಂಡ್ತಿ ಪತಿವ್ರತೆನೋ ಅವರೆಲ್ಲ ಬಿಜೆಪಿಗೆ ವೋಟ್ ಹಾಕಿ': ವ್ಯಕ್ತಿಯಿಂದ ವಿವಾದಾತ್ಮಕ ವಾಟ್ಸಾಪ್‌ ಸ್ಟೇಟಸ್‌ !

ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಬಜರಂಗದಳ ಕಾರ್ಯಕರ್ತ ಕಾರ್ತಿಕ್‌ ವಾಟ್ಸಾಪ್‌ನಲ್ಲಿ ವಿವಾದಾತ್ಮಕ  ಸ್ಟೇಟಸ್‌ವೊಂದನ್ನು ಹಾಕಿದ್ದಾರೆ. ಸದ್ಯ ಇದು ಜಿಲ್ಲೆಯಾದ್ಯಂತ ಪ್ರತಿಭಟನೆಗೆ ಕಾರಣವಾಗಿದೆ.

First Published May 11, 2023, 3:53 PM IST | Last Updated May 11, 2023, 3:53 PM IST

ಚಿಕ್ಕಮಗಳೂರು: ಬಜರಂಗದಳ ಕಾರ್ಯಕರ್ತನೊಬ್ಬನ ವಾಟ್ಸಾಪ್ ಸ್ಟೇಟಸ್‌ ಜಿಲ್ಲೆಯಾದ್ಯಂತ ರಾದ್ಧಾಂತವನ್ನು ಸೃಷ್ಟಿ ಮಾಡಿದೆ. 'ಯಾರ ಹೆಂಡ್ತಿ ಪತಿವ್ರತೆನೋ ಅವರೆಲ್ಲ ಬಿಜೆಪಿಗೆ ವೋಟ್ ಹಾಕಿ' ಎಂದು ವ್ಯಕ್ತಿ ಬರೆದು ಸ್ಟೇಟಸ್ ಹಾಕಿದ್ದಾನೆ ಎನ್ನಲಾಗ್ತಿದೆ. ಕಾರ್ತಿಕ್ ಜಿಲ್ಲೆಯ ತರೀಕೆರೆ ತಾಲೂಕಿನ ರಂಗೇನಹಳ್ಳಿಯ ಬಜರಂಗದಳ ಕಾರ್ಯಕರ್ತನಾಗಿದ್ದಾನೆ. ಈತನ ಸ್ಟೇಟಸ್ ನೋಡಿ ಸ್ಥಳೀಯರು ರೊಚ್ಚಿಗೆದ್ದಿದ್ದು, ಪ್ರತಿಭಟನೆ ನಡೆಸಿದ್ದಾರೆ. ಲಕ್ಕವಳ್ಳಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಾರ್ತಿಕ್ ಬಂಧನಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ವೀಕ್ಷಿಸಿ: ರಾಜ್ಯದಲ್ಲಿ ಬಹುಮತದ ಬಿಜೆಪಿ ಸರ್ಕಾರ ಬರಲಿದೆ: ಸಿ ಎಂ ಬೊಮ್ಮಾಯಿ

Video Top Stories