ರಾಜ್ಯದಲ್ಲಿ ಬಹುಮತದ ಬಿಜೆಪಿ ಸರ್ಕಾರ ಬರಲಿದೆ: ಸಿ ಎಂ ಬೊಮ್ಮಾಯಿ

ಜನತೆ ತೋರಿದ ಪ್ರೀತಿಗೆ ನಾನು ಚಿರಋಣಿ. ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಿದರು ಇದು ಒಳ್ಳೆಯ ಬೆಳವಣೆಗೆ ಎಂದು ಸಿ ಎಂ ಬೊಮ್ಮಾಯಿ ಹೇಳಿದರು.

First Published May 11, 2023, 1:22 PM IST | Last Updated May 11, 2023, 1:22 PM IST

ಜನತೆ ತೋರಿದ ಪ್ರೀತಿಗೆ ನಾನು ಚಿರಋಣಿ. ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಿದರು ಇದು ಒಳ್ಳೆಯ ಬೆಳವಣೆಗೆ ಎಂದು ಸಿ ಎಂ ಬೊಮ್ಮಾಯಿ ಹೇಳಿದರು. ಮಾಧ್ಯಮದ ಜತೆ ಮಾತನಾಡಿದ ಅವರು ದೊಡ್ಡ ಬಹುಮತದಿಂದ ಗೆಲ್ಲುತ್ತೇವೆ,  ಯಾವುದೇ ಅನುಮಾನ ಬೇಡಾ, ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೆವೆ ಎಂದು ಹೇಳಿದರು.  ನನ್ನ ವಿರುದ್ಧ ಷಡ್ಯಂತರ, ಅಪ್ರಚಾರ ಮಾಡಿದರು ಆದರೆ ನಿನ್ನೆಗೆ ಮುಗಿದಿದೆ ಅದು. ಇನ್ನು ಮತದಾನೋತ್ತರ ಸಮೀಕ್ಷೆಗಳು ಕಳೆದ ಬಾರಿ ಕಾಂಗ್ರೆಸ್ ಅಧಿಕ ಸ್ಥಾನ ಅಂತ ಹೇಳಿದ್ದವು ಆದರೆ ಫಲಿತಾಂಶದ ದಿನ ಅದು ಉಲ್ಟಾ ಆಯಿತು. ಮೋದಿಯವರ ಪ್ರಚಾರ ಬಿಜೆಪಿಗೆ ಪ್ಲಸ್ ಆಗಿದೆ ಇದು ಮಹಿಳೆಯರು ಮತ್ತು  ಯುವಕರ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟರು.
 

Video Top Stories