ಫ್ಯಾಮಿಲಿ ಪಾಲಿಟಿಕ್ಸ್ : ಸುಮಲತಾಗೆ ಹೆಚ್‌ಡಿಕೆ ತಿರುಗೇಟು
ರಣಕಣದಲ್ಲಿ ಕುಮಾರಸ್ವಾಮಿ, ಸುಮಲತಾ ಸಮರ
ಸಂಸದೆ ಸುಮಲತಾಗೆ ಕೌಂಟರ್ ಕೊಟ್ಟ ಹೆಚ್‌ಡಿಕೆ
ಹೇಳಿಕೆಗೆ ಉತ್ತರಿಸುವ ಅವಶ್ಯಕತೆ ಇಲ್ಲವೆಂದ ದಳಪತಿ
ಬೆಂಗಳೂರು: ಸಂಸದೆ ಸುಮಲತಾಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೌಂಟರ್ ಕೊಟ್ಟಿದ್ದಾರೆ. ಸುಮಲತಾ ಜೆಡಿಎಸ್‌ನ ಫ್ಯಾಮಿಲಿ ಪಾಲಿಟಿಕ್ಸ್ ಬಗ್ಗೆ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹೆಚ್‌ಡಿಕೆ, ಸುಮಲತಾ ಹೇಳಿಕೆಗೆ ಉತ್ತರಿಸಬೇಕಾದ ಅವಶ್ಯಕತೆ ನನಗಿಲ್ಲ. ಅವರನ್ನು ಟೀಕಿಸುವಷ್ಟು ವ್ಯಕ್ತಿತ್ವ ನಾನು ಬೆಳಸಿಕೊಂಡಿಲ್ಲ ಎನ್ನುವ ಮೂಲಕ ಟಾಂಗ್ ನೀಡಿದ್ದಾರೆ. ನಿಮ್ಮ ವೋಟ್‌ನಿಂದ ಮಂಡ್ಯ ಜಿಲ್ಲೆ ಅಭಿವೃದ್ಧಿಯಾಗಬೇಕಾ ಅಥವಾ ಒಂದು ಕುಟುಂಬ ಅಭಿವೃದ್ಧಿಯಾಗಬೇಕಾ ಎಂದು ಸಂಸದೆ ಸುಮಲತಾ ಪ್ರಶ್ನಿಸಿದ್ದರು. ಇದಕ್ಕೆ ದಳಪತಿ ಬೆಂಗಳೂರಿನಲ್ಲಿ ಕೌಂಟರ್ ಕೊಟ್ಟಿದ್ದಾರೆ.
ಇದನ್ನೂ ವೀಕ್ಷಿಸಿ: ರಾಜ್ಯದಲ್ಲೂ ಡಬ್ಬಲ್ ಇಂಜಿನ್ ಸರ್ಕಾರ ಬರಲಿ: ಯೋಗಿ ಆಡಳಿತ ಕೊಂಡಾಡಿದ ಸುಮಲತಾ