Asianet Suvarna News Asianet Suvarna News

ಸಿದ್ದುಗೆ ಕೋಲಾರ, ಮುನಿಯಪ್ಪಗೆ ದೇವನಹಳ್ಳಿ, ಕಾಂಗ್ರೆಸ್ ಹೊಸ ತಂತ್ರಕ್ಕೆ ಶಮನವಾಗುತ್ತಾ ಬಂಡಾಯ?

ದೇವನಹಳ್ಳಿಯಿಂದ ಕೆಹೆಚ್ ಮುನಿಯಪ್ಪ ಸ್ಪರ್ಧೆ, ಕಾಂಗ್ರೆಸ್‌ನಲ್ಲಿ ಟಿಕೆಟ್ ಅರ್ಜಿ ಸಲ್ಲಿಸಲು ಬೇಕು 2 ಲಕ್ಷ ರೂಪಾಯಿ,  ಟಿಪ್ಪು ಪ್ರತಿಮೆಗೆ ಸಿಎಂ ಇಬ್ರಾಹಿಂ ಗರಂ, ಜಾರಕಿಹೊಳಿ ಕ್ಷೇತ್ರದಲ್ಲಿ ಸೂಲಿಬೆಲೆ ನಾನು ಹಿಂದೂ ಕಾರ್ಯಕ್ರಮ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಅನ್ನೋ ಮಾತುಗಳು ಬಲವಾಗುತ್ತಿದ್ದಂತೆ ಇತ್ತ ಕಾಂಗ್ರೆಸ್ ಹಿರಿಯ ನಾಯಕ ಕೆಎಚ್ ಮನಿಯಪ್ಪ ಒಳಗೊಳಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಮುನಿಸಿಕೊಂಡಿರುವ ಕೋಲಾರದ ನಾಯಕ ಕೆಹೆಚ್ ಮುನಿಯಪ್ಪ ಅವರಿಗೆ ದೇವನಹಳ್ಳಿಯಿಂದ ಟಿಕೆಟ್ ನೀಡಲು ತಯಾರಿಗಳು ನಡೆಯುತ್ತಿದೆ ಅನ್ನೋ ಮಾತು ಕೇಳಿಬಂದಿದೆ. ಇತ್ತ ಕಾಂಗ್ರೆಸ್‌ನಲ್ಲಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆಯುತ್ತಿದೆ. ಆದರೆ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಲು 2 ಲಕ್ಷ ರೂಪಾಯಿ ಪಕ್ಷಕ್ಕೆ ದೇಣಿಗೆ ನೀಡಬೇಕು. ಇದರ ನಡುವೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬಣದ ನಾಯಕರು ಒಂದೇ ಕ್ಷೇತ್ರದಲ್ಲಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

Video Top Stories