Asianet Suvarna News Asianet Suvarna News

ಬಿಎಸ್‌ವೈ ಮುಂದೆ ನಡೆಯಲ್ಲ ಹಕೀಕತ್ತು, ಘರ್ಜಿಸಿದವರೆಲ್ಲಾ ಗಪ್‌ಚುಪ್, ಸಿಎಂ 10 ತಾಕತ್ತುಗಳಿವು..!

- 3 ದಿನ ಶಾಸಕರು, ಸಚಿವರ ಅಭಿಪ್ರಾಯ ಸಂಗ್ರಹಿಸಿ ದೆಹಲಿಗೆ ತೆರಳಿದ ಅರುಣ್‌ ಸಿಂಗ್‌

- ಶೀಘ್ರದಲ್ಲೇ ರಾಜ್ಯದ ವಿದ್ಯಮಾನಗಳ ಬಗ್ಗೆ ಪಕ್ಷದ ಹೈಕಮಾಂಡ್‌ ವರದಿ ಸಲ್ಲಿಕೆ ಸಾಧ್ಯತೆ

- ವರಿಷ್ಠರ ನಿರ್ಧಾರ ಹೊರಬೀಳುವವರೆಗೆ ಶಾಸಕರ ಬಹಿರಂಗ ಹೇಳಿಕೆಗೆ ಬೀಳುತ್ತಾ ಬ್ರೇಕ್‌?

ಬೆಂಗಳೂರು (ಜೂ. 19): ನಾಯಕತ್ವ ಬದಲಾವಣೆ ಸೇರಿದಂತೆ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಆಡಳಿತಾರೂಢ ಬಿಜೆಪಿಯಲ್ಲಿ ಉದ್ಭವಿಸಿದ್ದ ಬಿಕ್ಕಟ್ಟು ಸದ್ಯಕ್ಕೆ ದೆಹಲಿಗೆ ಸ್ಥಳಾಂತರಗೊಂಡಿದೆ.  

ನಾಯಕತ್ವ ಬದಲಾವಣೆ: ಹಳೇ 'ಹುಲಿ'ನಾ.? ಹೊಸ 'ಕಲಿ'ನಾ.? ಅಂತಿಮ ವಿಜಯ ಯಾರದ್ದು..?

ಅರುಣ್‌ ಸಿಂಗ್‌ ಅವರು ಮೂರು ದಿನಗಳಲ್ಲಿ ಎಲ್ಲ ಹಂತದ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. ಸಚಿವರು, ಶಾಸಕರು, ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ವಿವಿಧ ಮೋರ್ಚಾಗಳ ರಾಜ್ಯಾಧ್ಯಕ್ಷರು ಹಾಗೂ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸದಸ್ಯರೊಂದಿಗೆ ಮುಕ್ತವಾಗಿ ಚರ್ಚೆ ಮಾಡಿದ್ದಾರೆ. ಈ ವೇಳೆ ಬಿಎಸ್‌ವೈ ವಿರುದ್ಧ ಬಂಡಾಯವೆದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ. ಸಿಎಂ ಕಾರ್ಯವೈಖರಿ ಬಗ್ಗೆ ಶ್ಲಾಘಿಸಿದ್ದಾರೆ. ಇದರಿಂದ ವಿರೋಧಿ ಬಣದವರಿಗೆ ಮುಖಭಂಗವಾದಂತಾಗಿದೆ. ಬಿಎಸ್‌ವೈಗೆ ಪ್ಲಸ್ ಪಾಯಿಂಟಾದ 10 ಅಂಶಗಳು ಯಾವುದು ನೋಡೋಣ ಬನ್ನಿ.