Asianet Suvarna News Asianet Suvarna News

ಕಾಂಗ್ರೆಸ್ ಟಿಕೆಟ್‌ಗಾಗಿ 1,200 ಅಧಿಕ ಅರ್ಜಿ, 18 ಕೋಟಿ ಆದಾಯ!

ಚಿಲುಮೆ ಕಚೇರಿ ಮೇಲೆ ಪೊಲೀಸರ ರೇಡ್, ಜೆಡಿಎಸ್‌ನಿಂದ ಪಂಚರತ್ನ ರಥಯಾತ್ರೆ ಆರಂಭಿಸಿ ಶಕ್ತಿ ಪ್ರದರ್ಶನ, ಯಾವ ಕ್ಷೇತ್ರದಿಂದ ಸಿದ್ದರಾಮಯ್ಯ ಅರ್ಜಿಸೇರಿದಂತೆ ಇಂದಿನ ಇಡೀ ದಿನ ಸುದ್ದಿ ವಿಡಿಯೋ ಇಲ್ಲಿದೆ.

Nov 18, 2022, 10:53 PM IST

ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಪಡೆಯಲು 2 ಲಕ್ಷ ರೂಪಾಯಿ ನೀಡಬೇಕು ಅನ್ನೋ ಹೊಸ ನಿಯಮ ಜಾರಿಗೆ ತರಲಾಗಿದೆ. ಸಾಮಾನ್ಯ ಕೆಟಗರಿಯಲ್ಲಿ ಅರ್ಜಿ ಪಡೆಯುವ ಅಭ್ಯರ್ಥಿಗಳು 2 ಲಕ್ಷ ರೂಪಾಯಿ ಹಾಗೂ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಅಭ್ಯರ್ಥಿಗಳಿಗೆ 1 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಕಾಂಗ್ರೆಸ್ ಹೊಸ ನಿಯಮ ಘೋಷಣೆಯಾದ ಬೆನ್ನಲ್ಲೇ ಈಗಾಗಲೇ 1,200 ಅರ್ಜಿಗಳನ್ನು ಅಭ್ಯರ್ಥಿಗಳು ಪಡೆದುಕೊಂಡಿದ್ದಾರೆ. ಇದರಿಂದ ರಾಜ್ಯ ಕಾಂಗ್ರೆಸ್‌ಗೆ 18 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ.  ಆದರೆ ರಾಜ್ಯ ಕಾಂಗ್ರೆಸ್‌ನಲ್ಲಿನ ಕ್ಷೇತ್ರ ಗೊಂದಲ, ಸಿದ್ದರಾಮಯ್ಯ ಕ್ಷೇತ್ರ ಇನ್ನೂ ಬಗೆಹರಿದಿಲ್ಲ.