Asianet Suvarna News Asianet Suvarna News

ಬಿಎಸ್‌ವೈ ರಾಜೀನಾಮೆ ಬೆನ್ನಲ್ಲೇ ಅಸ್ತತ್ವ ಕಳೆದುಕೊಂಡ ಸಚಿವ ಸಂಪುಟ

ನಿರೀಕ್ಷೆಯಂತೆಯೇ ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜಿನಾಮೆ ನೀಡಿದ್ದು, ರಾಜ್ಯಪಾಲರು ಹಾಲಿ ಸಚಿವ ಸಂಪುಟವನ್ನು ವಿಸರ್ಜನೆ ಮಾಡಿದ್ದಾರೆ.

ಬೆಂಗಳೂರು, (ಜು.26): ನಿರೀಕ್ಷೆಯಂತೆಯೇ ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜಿನಾಮೆ ನೀಡಿದ್ದು, ರಾಜ್ಯಪಾಲರು ಹಾಲಿ ಸಚಿವ ಸಂಪುಟವನ್ನು ವಿಸರ್ಜನೆ ಮಾಡಿದ್ದಾರೆ.

ಬಿಎಸ್‌ವೈ ರಾಜೀನಾಮೆ: ಕಟೀಲ್‌ಗೆ ಹೈಕಮಾಂಡ್ ಬುಲಾವ್, ರಾಜ್ಯಪಾರನ್ನ ಭೇಟಿಯಾದ ಸ್ಪೀಕರ್

ಇದಕ್ಕೂ ಮೊದಲು ಸಿಎಂ ಬಿಎಸ್ ಯಡಿಯೂರಪ್ಪ ಅವರು, ರಾಜ್ಯಪಾಲ ಥಾವರ್ ಚಂದ್​ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ತಮ್ಮ ರಾಜಿನಾಮೆ ಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ರಾಜ್ಯಪಾಲರು ಮುಂದಿನ ಸಿಎಂ ಪದಗ್ರಹಣ ಮಾಡುವವರೆಗೂ ಹಂಗಾಮಿ ಸಿಎಂ ಆಗಿ ಮುಂದುವರೆಯುವಂತೆ ಸೂಚನೆ ನೀಡಿದರು. ಅಲ್ಲದೆ ಹಾಲಿ ಹಾಲಿ ಸಚಿವ ಸಂಪುಟವನ್ನು ವಿಸರ್ಜನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಸಿಎಂ ಜೊತೆ ಯಾರೆಲ್ಲಾ ಸಂಪುಟ ಸೇರಲಿದ್ದಾರೆ ಎನ್ನುವುದು ಕೂಡ ಕುತೂಹಲ ಮೂಡಿಸಿದೆ.

Video Top Stories