ಚುನಾವಣೆ ಟೈಮ್‌ನಲ್ಲಿ ರಾಜ್ಯದಲ್ಲಿ ಮೋದಿ ಮಹಾಯಾತ್ರೆ!

ರಾಜ್ಯದಲ್ಲಿಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಭರ್ಜರಿಯಾಗಿ ಪ್ಲ್ಯಾನ್‌ ಮಾಡುತ್ತಿದೆ. ಚುನಾವಣೆಯ ಸಮಯದಲ್ಲಿ ಒಂದೇ ತಿಂಗಳಲ್ಲೇ ಮೋದಿ 20 ಬಾರಿ ಸಮಾವೇಶ ನಡೆಸುವ ಸಾಧ್ಯತೆ ಇದೆ. ಕೊನೇ ಮೂರು ದಿನ ರಾಜ್ಯದಲ್ಲೇ ಪ್ರಧಾನಿ ಠಿಕಾಣಿ ಹೂಡುವ ನಿರೀಕ್ಷೆ. ಅಧಿಕಾರ ಉಳಿಸಿಕೊಳ್ಳಲು ಉತ್ತರಾಖಂಡ ಮಾದರಿ 50 ತಜ್ಞರ ನೇಮಕ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
 

First Published Apr 3, 2023, 11:08 PM IST | Last Updated Apr 3, 2023, 11:08 PM IST

ಬೆಂಗಳೂರು (ಏ.3): ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಲು ಬಿಜೆಪಿ ಭರ್ಜರಿಯಾ ಪ್ಲ್ಯಾನ್‌ ಮಾಡಿದ್ದು, ಮೋದಿ ಜನಪ್ರಿಯತೆಯನ್ನು ಉತ್ತಮವಾಗಿ ಬಳಸಿಕೊಳ್ಳಲು ನಿರ್ಧಾರ ಮಾಡಿದೆ. 1 ತಿಂಗಳಲ್ಲಿ ಮೋದಿ 20 ಸಮಾವೇಶ ನಡೆಸಲು ಯೋಜನೆ ರೂಪಿಸುತ್ತಿದೆ. ನಮೋ ಜನಪ್ರಿಯತೆ ಲಾಭ ಪಡೆಯಲು ಬಿಜೆಪಿ ಪಕ್ಕಾ ಪ್ಲ್ಯಾನ್‌ ಮಾಡಿದೆ.

6 ವಲಯದಲ್ಲಿ ತಲಾ ಕನಿಷ್ಠ 3 ಸಮಾವೇಶಗಳ ನಿರೀಕ್ಷೆ ಮಾಡಲಾಗಿದೆ. ಮೇ 6ರಿಂದ 8ರವರೆಗೆ ರಾಜ್ಯದಲ್ಲೇ ಮೋದಿ ಠಿಕಾಣಿ ಹೂಡುವ ನಿರೀಕ್ಷೆಯೂ ಇದೆ. ಚುನಾವಣೆ ಪ್ರಚಾರ ಕೊನೆಗೊಳ್ಳುವ ಮೂರು ದಿನ ರಾಜ್ಯದಲ್ಲಿಯೇ ಮೋದಿ ವಾಸ್ತವ್ಯ ಹೂಡಲಿದ್ದಾರೆ. ಬಹಿರಂಗ ಪ್ರಚಾರ ಅಂತ್ಯಕ್ಕೂ ಮೊದಲು ಮೋದಿ ಮ್ಯಾಜಿಕ್ ನಡೆಯಲಿದೆ. ಜನರೊಂದಿಗೆ ಬೆಸೆಯುವಂತಹ ಕಾರ್ಯಕ್ರಮಗಳ  ಆಯೋಜನೆಯಾಗಲಿದೆ.

ಬಿಜೆಪಿಗೆ ಸೇರ್ಪಡೆಯಾದ ರಾಮಕೃಷ್ಣ ಹೆಗಡೆ ಕುಟುಂಬದ ಕುಡಿ: ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದ ಶಶಿಭೂಷಣ ಹೆಗಡೆ

‘ಬಿಜೆಪಿ ಸರ್ಕಾರದ ಮೇಲೆ ಜನರ  ವಿಶ್ವಾಸ ಹೆಚ್ಚಾಗಿದೆ. ಹತ್ತಾರು ಕಾರ್ಯಕ್ರಮದ ಶ್ರೇಯ ನಮ್ಮ ಸಿಎಂಗೆ ಸಲ್ಲುತ್ತದೆ. ರಾಜ್ಯದ ಜನರು ಆಶೀರ್ವಾದ ಮಾಡಲು ಸಿದ್ಧರಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಪ್ರಚಾರದಲ್ಲಿ ನಮ್ ಹಿಂದಿವೆ. ಮತ್ತೆ ಬಿಜೆಪಿ ಸರ್ಕಾರ ರಚನೆ ಮಾಡೋದು ಶತಸಿದ್ಧ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್ ಕಟೀಲ್‌ ಹೇಳಿದ್ದಾರೆ.

Video Top Stories