ದರ್ಶನ್ ಜೈಲ್ ಜರ್ನಿ! ಅಗ್ರಹಾರದಲ್ಲಿ ರಾಜಾತಿಥ್ಯ.. ಬಳ್ಳಾರಿಯಲ್ಲಿ ಹೇಗಿತ್ತು ಜೈಲುವಾಸ?

ದರ್ಶನ್ಗೆ ಆರೋಗ್ಯ ಸಮಸ್ಯೆ ಇರೋದ್ರಿಂದ ಚಿಕಿತ್ಸೆಗಾಗಿ ಈ ಬೇಲ್ ನೀಡಲಾಗಿದೆ. ಈ ಬೇಲ್ ಸಿಗುವವರೆಗೆ ದರ್ಶನ್ ಅರೆಸ್ಟ್ ಆದಾಗಿನಿಂದ ಬೇಲ್ ಸಿಗುವವರೆಗೆ ಒಟ್ಟು 141 ದಿನಗಳು ಕಳೆದಿವೆ.

First Published Oct 31, 2024, 1:01 PM IST | Last Updated Oct 31, 2024, 1:01 PM IST

ಜೂ. 11 ಅರೆಸ್ಟ್.. ಜೂ.22 ಜೈಲ್ ಅಕ್ಟೋಬರ್ 30 ಬೇಲ್..! ಅಗ್ರಹಾರದಲ್ಲಿ ರಾಜಾತಿಥ್ಯ.. ಬಳ್ಳಾರಿಯಲ್ಲಿ ಹೇಗಿತ್ತು ಜೈಲುವಾಸ..? 141 ದಿನಗಳ ನರಕ ದರ್ಶನ.. ಡಿ ಗ್ಯಾಂಗ್ ಲೀಡರ್ ಜೈಲ್ ಜರ್ನಿ..! ಐದು ತಿಂಗಳ ನಂತರ ಕೊನೆಗೂ ದರ್ಶನ್ಗೆ ಮಧ್ಯಂತರ ಬೇಲ್ ಸಿಕ್ಕಿದೆ. ಈ ಬೇಲ್ ಕೇವಲ ಆರು ವಾರಗಳಿಗೆ ಮಾತ್ರ. ದರ್ಶನ್ಗೆ ಆರೋಗ್ಯ ಸಮಸ್ಯೆ ಇರೋದ್ರಿಂದ ಚಿಕಿತ್ಸೆಗಾಗಿ ಈ ಬೇಲ್ ನೀಡಲಾಗಿದೆ. ಈ ಬೇಲ್ ಸಿಗುವವರೆಗೆ ದರ್ಶನ್ ಅರೆಸ್ಟ್ ಆದಾಗಿನಿಂದ ಬೇಲ್ ಸಿಗುವವರೆಗೆ ಒಟ್ಟು 141 ದಿನಗಳು ಕಳೆದಿವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರು ಜೈಲು ಸೇರಿದ್ದ ದರ್ಶನ್ ಅರಾಜಾತಿಥ್ಯ ಪಡೆಯುತ್ತಿದ್ದಾನೆ ಎಂಬ ಕಾರಣಕ್ಕೆ ಬಿಸಿಲನಾಡು ಬಳ್ಳಾರಿ ಶಿಫ್ಟ್ ಮಾಡಲಾಗುತ್ತೆ. ಬಳ್ಳಾರಿ ಜೈಲಿನಲ್ಲಿ ದರ್ಶನ್ ಎಷ್ಟು ದಿನಗಳು ಇದ್ದರು? ದರ್ಶನ್ರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಿಸಿಲುನಾಡು ಬಳ್ಳಾರಿಗೆ ಆಗಸ್ಟ್ 29ರಂದು ಶಿಫ್ಟ್ ಮಾಡಲಾಗುತ್ತೆ. 

ಇಲ್ಲಿ ಇನ್ನೊಂದು ಅಚ್ಚರಿ ಏನ್ ಗೊತ್ತಾ? ದರ್ಶನ್ ಬಳ್ಳಾರಿ ಜೈಲಿನಲ್ಲೂ 70 ದಿನಗಳು ಇರಲಿಲ್ಲ. ಅಂದ್ರೆ ಬಳ್ಳಾರಿ ಜೈಲಿನಲ್ಲೂ ದರ್ಶನ್ 70 ದಿನಗಳು ಕಾಲ್ಶೀಟ್ ಕೊಡಲಿಲ್ಲ. 62 ದಿನಗಳ ಕಾಲ ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್ಗೆ ಈಗ ಬೆನ್ನು ನೋವಿನ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಸಿಕ್ಕಿದೆ. ಹಾಗಿದ್ರೆ ದರ್ಶನ್ಗೆ ಯಾವೆಲ್ಲ  ಕಂಡಿಷನ್ಗಳ ಮೇಲೆ ಮಧ್ಯಂತರ ಜಾಮೀನು ನೀಡಲಾಗಿದೆ.ದರ್ಶನ್ಗೆ ಬೆನ್ನು ನೋವಿನ ಚಿಕಿತ್ಸೆಗಾಗಿ ಆರು ವಾರಗಳ ಮಧ್ಯಂತರ ಜಾಮೀನು ನೀಡಲಾಗಿದೆ. ಈ ಜಾಮೀನು ನೀಡಲು ಕೋರ್ಟ್ ಒಟ್ಟು ಎಂಟು ಕಂಡಿಷನ್ಸ್ ಹಾಕಿದೆ. ಕೋರ್ಟ್ ಹಾಕಿದ್ದ ಕಂಡಿಷನ್ಗಳ ಮೇಲೆ ದರ್ಶನ್ ಈಗ ಚಿಕಿತ್ಸೆಗಾಗಿ ಮಧ್ಯಂತರ ಬೇಲ್ ಮೇಲೆ ಬೆಂಗಳೂರಿಗೆ ಬಂದಿದ್ದಾರೆ. ಮುಂದಿನ 6 ವಾರಗಳ ಕಾಲ ದರ್ಶನ್ ಬೆನ್ನು ನೋವಿನ ಚಿಕಿತ್ಸೆ ಪಡೆಯಲಿದ್ದಾರೆ. ಒಟ್ಟಿನಲ್ಲಿ 141 ದಿನಗಳ ಕಾಲ ಜೈಲಿನಲ್ಲಿದ್ದ ದರ್ಶನ್ಗೆ ಈಗ ಚಿಕಿತ್ಸೆಗಾಗಿ ಸಿಕ್ಕಿರುವ ಬೇಲ್ನಿಂದ ಒಂದಿಷ್ಟು ರಿಲೀಪ್ ಸಿಕ್ಕಂತಾಗಿದೆ.

Video Top Stories