Asianet Suvarna News Asianet Suvarna News

ಚುನಾವಣಾ ರಣಕಣಕ್ಕೆ ಮೋದಿ ಎಂಟ್ರಿ..ಮ್ಯಾರಥಾನ್‌ ಸಮಾವೇಶ, ಮೆಗಾ ರೋಡ್‌ ಶೋ!

ಬಿಜೆಪಿ ಪಾಲಿಗೆ ಚುನಾವಣೆ ಗೆಲುವಿನ ಬ್ರಹ್ಮಾಸ್ತ್ರ ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟಾಗಿದೆ. ರಾಜ್ಯದಲ್ಲಿ ಮೂರು ಸಮಾವೇಶ ಹಾಗೂ ಒಂದ ಮೆಗಾ ರೋಡ್‌ ಶೋನಲ್ಲಿ ಮೋದಿ ಭಾಗಿಯಾಗಿದ್ದಾರೆ.
 

ಬೆಂಗಳೂರು (ಏ.29): ಚುನಾವಣಾ ನೀತಿಸಂಹಿತೆ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಬಂದ ಪ್ರಧಾನಿ ನರೇಂದ್ರ ಚುನಾವಣಾ ಪ್ರಚಾರದಲ್ಲಿ ಭಾಗಿಯಾದರು. ಇಂದು ಮೋದಿ ಹೋದಲೆಲ್ಲಾ ಅವರಿಗೆ ಜನರಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ಅದರೊಂದಿಗೆ ಕರ್ನಾಟಕ ಕುರುಕ್ಷೇತ್ರಕ್ಕೆ ಮೋದಿ ರಂಗಪ್ರವೇಶ ಆಗಿದೆ.

ಮೂರು ಭರ್ಜರಿ ಸಮಾವೇಶಗಳನ್ನು ನಡೆಸಿದ ಬಳಿಕ ಸಂಜೆಯ ವೇಳೆಗ ಬೆಂಗಳೂರಿನಲ್ಲಿ ಆಕರ್ಷಕ ರೋಡ್‌ ಶೋ ನಡೆಸಿದರು. ಸಾರ್ವಜನಿಕರು ರಸ್ತೆಯ ಬದಿ ನಿಂತು ಪ್ರಧಾನಿ ನರೇಂದ್ರ ಮೋದಿ ಅವರು ಸಾಗುವ ಮಾರ್ಗಕ್ಕೆ ಹೂಮಳೆ ಸುರಿಸಿದರು.

MODI ROADSHOW: ಬೆಂಗಳೂರು ಸಂಜೆಯ ಆಗಸಕ್ಕೆ ಮೋದಿ ಕೇಸರಿ ಕಮಾನು!

ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲದೆ ಇಂದು ಕರ್ನಾಟಕದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಕೂಡ ಇದ್ದರು.  ಮೋದಿ ಜೊತೆ ಈ ತ್ರಿಮೂರ್ತಿಗಳು ಚುನಾವಣಾ ದಂಡಯಾತ್ರೆ ನಡೆಸಿದ್ದಾರೆ.

Video Top Stories