ಡಿಕೆಶಿ-ಸಿದ್ಧರಾಮಯ್ಯರಿಂದಲೇ ಕಾಂಗ್ರೆಸ್‌ ಪತನ ಆಗುತ್ತೆ ಅಂದಿದ್ದ ಶೆಟ್ಟರ್‌, ಅವರನ್ನೇ ತಬ್ಬಿಕೊಂಡರಲ್ಲ!

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ಅವರು ತಾವು ಕಟ್ಟಿ ಬೆಳೆಸಿದ ಬಿಜೆಪಿಯನ್ನು ತೊರೆದು ಕಾಂಗ್ರೆಸ್‌ ಸೇರ್ಪಡೆ ಆಗಿದ್ದಾರೆ. ಅಂದು ಕಾಂಗ್ರೆಸ್‌ ವಿರುದ್ದ ಮಾತಿನ ಯುದ್ದ ಮಾಡಿದವರು ಇಂದು ಕಾಂಗ್ರೆಸ್‌ ಜತೆ ಹೊಸ ಸಂಬಂಧ ಬೆಳೆಸಿದ್ದಾರೆ.

First Published Apr 18, 2023, 7:41 PM IST | Last Updated Apr 18, 2023, 7:41 PM IST

ಬೆಂಗಳೂರು (ಏ.18): ಕಾಂಗ್ರೆಸ್‌ ಸೇರೋರು ಮೂರ್ಖರು ಎಂದು ಹೇಳಿದ್ದ ಜಗದೀಶ್‌ ಶೆಟ್ಟರ್‌ ಇಂದು ಅದೇ ಕಾಂಗ್ರೆಸ್‌ ಪಕ್ಷದ ನಾಯಕರಾಗಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ನಲ್ಲಿ ಹುಬ್ಬಳ್ಳಿ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಈ ಸುದ್ದಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಅಂದು ಕಾಂಗ್ರೆಸ್‌ ವಿರುದ್ಧ ಮಾತಿನ ಯುದ್ಧ ಮಾಡಿದವರು ಇಂದು ಅದೇ ಪಕ್ಷದೊಂದಿಗೆ ಹೊಸ ಸಖ್ಯ ಬೆಳೆಸಿದ್ದಾರೆ. ರಾಜಕಾರಣಲ್ಲಿ ಏನು ಬೇಕಾದರೂ ಆಗಬಹುದು ಅನ್ನೋದಕ್ಕೆ ಇದು ಮತ್ತೊಂದು ಜ್ವಲಂತ ಉದಾಹರಣೆಯಷ್ಟೇ.

ಶೆಟ್ಟರ್‌ರನ್ನು ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಪ್ರಯತ್ನಿಸಿದೆ: ಜೋಶಿ ಬೇಸರ

Video Top Stories