Asianet Suvarna News Asianet Suvarna News

Ground Report:ಮೈಸೂರಿನಲ್ಲಿ ರಂಗೇರಿದ ಟಿಕೆಟ್‌ ಫೈಟ್‌: ಘಟಾನುಘಟಿಗಳು ಎಂಟ್ರಿ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ಜೋರಾಗಿದ್ದು, ಮೈಸೂರಿನಲ್ಲಿ ಎಲ್ಲಾ ಪಕ್ಷಗಳಲ್ಲಿ ಟಿಕೆಟ್‌ ಫೈಟ್‌ ಶುರುವಾಗಿದೆ.
 

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಅಖಾಡ ಸಿದ್ಧವಾಗಿದ್ದು, ಮೂರು ಪಕ್ಷಗಳ ನಡುವೆ ಹಣಾಹಣಿ ನಡೆದಿದೆ.  ಮೈಸೂರು ಜಿಲ್ಲೆಯಲ್ಲಿ ಘಟಾನುಘಟಿಗಳು ಪೈಪೋಟಿಗೆ  ಸಜ್ಜಾಗಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌ ಟಿಕೆಟ್‌ ಬಹುತೇಕ ಅಂತಿಮವಾಗಿದ್ದು, ಮೈಸೂರಿನಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್‌ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಪ್ರಾಬಲ್ಯ ಹೊಂದಿದೆ. ಎಲ್ಲಾ ಜಾತಿ, ಜನಾಂಗದವರು ಇದ್ದು, ಒಂದೊಂದು ಕ್ಷೇತ್ರದಲ್ಲಿ ಒಂದೊಂದು ಜಾತಿ ಪ್ರಬಲವಾಗಿದೆ. ಕೃಷ್ಣರಾಜದಲ್ಲಿ ಬಿಜೆಪಿಯಿಂದ ಮಾಳವಿಕಾ ಅವಿನಾಶ್‌ ಹೆಸರು ಕೇಳಿ ಬಂದಿದೆ. ಚಾಮರಾಜದಲ್ಲಿ ಮೂರು ಪಕ್ಷಗಳಲ್ಲಿ  ಆಕಾಂಕ್ಷಿಗಳು ಹೆಚ್ಚಿದ್ದಾರೆ. ನರಸಿಂಹರಾಜದಲ್ಲಿ  ಕಾಂಗ್ರೆಸ್‌ನಿಂದ ಶಾಸಕ ತನ್ವೀರ್‌ ಸೇಠ್‌ ಕಣಕ್ಕೆ, ಜೆಡಿಎಸ್'ನಿಂದ ಮತ್ತೆ ಅಬ್ದುಲ್ಲಾ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ . ಮೈಸೂರಿನಲ್ಲಿ 11 ವಿಧಾನಸಭಾ ಕ್ಷೇತ್ರಗಳ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.

ಒಕ್ಕಲಿಗ ಮೀಸಲಾತಿ ಹೋರಾಟದ ಮೂಲಕ ಸಿಎಂ ಆಸೆ ಬಿಚ್ಚಿಟ್ಟ ಡಿಕೆಶಿ

Video Top Stories