News Hour: ನಾಳೆ ಕರ್ನಾಟಕ ಕುರುಕ್ಷೇತ್ರಕ್ಕೆ ಅಪ್ಪಳಿಸಲಿದೆ ನಮೋ ಸುನಾಮಿ!

ನಾಳೆ ಕರ್ನಾಟಕ ಕುರುಕ್ಷೇತ್ರಕ್ಕೆ ಬಿಜೆಪಿಯ ಪ್ರಧಾನ ಕಲಿ ನರೇಂದ್ರ ಮೋದಿ ಅವರ ರಂಗಪ್ರವೇಶವಾಗಲಿದೆ. ಏಕಾಂಗಿಯಾಗಿ ಪಕ್ಷದ ವರ್ಚಸ್ಸು ಏರಿಸಬಲ್ಲ ಛಾತಿ ಹೊಂದಿರುವ ಪ್ರಧಾನಿ ಮೋದಿ ಅವರ ಸಮಾವೇಶಕ್ಕೆ ರಾಜ್ಯ ಬಿಜೆಪಿ ಸಕಲ ಸಿದ್ಧತೆ ಮಾಡಿದೆ.

First Published Apr 28, 2023, 11:21 PM IST | Last Updated Apr 28, 2023, 11:21 PM IST

ಬೆಂಗಳೂರು (ಏ.28): ನಾಳೆಯಿಂದ ಕರ್ನಾಟಕ ಕುರುಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಎಂಟ್ರಿಯಾಗಲಿದೆ. ಎರಡು ದಿನಗಳ ಕಾಲ ಕರ್ನಾಟಕದಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. 2 ರೋಡ್‌ ಶೋ ಹಾಗೂ 6 ಸಮಾವೇಶಗಳನ್ನು ಮೋದಿ ನಡೆಸಲಿದ್ದಾರೆ. ನಾಲ್ಕು ಪ್ರಮುಖ ಜಿಲ್ಲೆಗಳನ್ನು ಗುರುತಿಸಿ ಕರ್ನಾಟಕದ ಮಹಾ ದಂಡಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ವೇಳಾಪಟ್ಟಿ ಸಿದ್ಧಮಾಡಲಾಗಿದೆ. ರಾಜ್ಯ ಬಿಜೆಪಿಯಿಂದ ಮುನಿಸಿಕೊಂಡಿರುವ ಮತದಾರರು ಮೋದಿ ಮುಖ ನೋಡಿ ಬದಲಾಗುವ ಸಾಧ್ಯತೆ ಇದೆ ಎನ್ನುವ ಲೆಕ್ಕಾಚಾರ ಇದರಲ್ಲಿದೆ.

ಇನ್ನೊಂದೆಡೆ, ಪ್ರಧಾನಿ ನರೇಂದ್ರ ಮೋದಿ ವಿಷಸರ್ಪ ಇದ್ದ ಹಾಗೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿರುವ ಮಾತಿಗೆ ಕಾಂಗ್ರೆಸ್‌ ಪಕ್ಷ ತೇಪೆ ಹಚ್ಚಲು ಪ್ರಯತ್ನ ಮಾಡಿದ್ದರೆ, ಇನ್ನೊಂದೆಡೆ ಬಿಜೆಪಿ ಇದನ್ನೇ ಚುನಾವಣೆಗೆ ಪ್ರಧಾನ ಅಸ್ತ್ರವನ್ನಾಗಿಸಿಕೊಳ್ಳಲು ಪ್ರಯತ್ನ ಮಾಡಿದೆ.

Party Rounds: ನಾಳೆಯಿಂದ 2 ದಿನ ರಾಜ್ಯದಲ್ಲಿ ಮೋದಿ ಮಿಂಚಿನ ಸಂಚಾರ

Video Top Stories