Asianet Suvarna News Asianet Suvarna News

ಸುಮಲತಾ, ರಾಕ್‌ಲೈನ್ ಬಗ್ಗೆ ಜೆಡಿಎಸ್ ಶಾಸಕ ರಮೇಶ್ ಗೌಡ ವಿವಾದಾತ್ಮಕ ಹೇಳಿಕೆ

Jul 15, 2021, 8:28 PM IST

ಬೆಂಗಳೂರು, (ಜುಲೈ.15):  ಮಂಡ್ಯದ ಅಕ್ರಮ ಗಣಿಗಾರಿಕೆ ಹಾಗೂ ಕೆಆರ್‌ಎಸ್ ಡ್ಯಾಂ ಬಿರುಕು ವಿಚಾರವಾಗಿ ವಿಧಾನಪರಿಷತ್ ಜೆಡಿಎಸ್ ಸದಸ್ಯ ರಮೇಶ್ ಗೌಡ ಅವರು ಸಂಸದೆ ಸುಮಲತಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.

ಡ್ಯಾಂ ಸುರಕ್ಷತೆ ಬಗ್ಗೆ ಯಾವುದನ್ನೂ ಮುಚ್ಚಿಡೋದು ಬೇಡ: ಅಧಿಕಾರಿಗಳಿಗೆ ಸುಮಲತಾ ಸೂಚನೆ

ಇಂದು (ಗುರುವಾರ) ವಿಧಾನಸೌಧದಲ್ಲಿ ಮಾತನಾಡಿದ ರಮೇಶ್ ಗೌಡ,ಸಂಸದೆ ಸುಮಲತಾ ಬೇಬಿಬೆಟ್ಟ ಅಕ್ರಮ ಗಣಿಗಾರಿಕೆ ವಿವಾದ ಹಿನ್ನೆಲೆಯಲ್ಲಿ ನಿರ್ಮಾಪಕ ರಾಕ್ ಲೈನ್ ವಿಡಿಯೋ ರಿಲೀಸ್ ವಿಚಾರವಾಗಿ ಮಾತನಾಡುತ್ತಾ, ಅವರು ತಾಕತ್ತಿದ್ದರೆ ವಿಡಿಯೋ ಬಿಡಲಿ. ನಾವೇನು ಸಿಡಿ ರಿಲೀಸ್ ಮಾಡ್ತೇವೆ ಎಂದಿದ್ವಾ? ರೂಂನಲ್ಲಿದ್ದಾಗ ವಿಡಿಯೋ ಮಾಡಿದ್ದಾರೆ ಅಂತಾರೆ. ಅವರೇ ರೂಂನಲ್ಲಿರೋದ್ರ ಬಗ್ಗೆ ಹೇಳ್ಕೊಂಡಿದ್ದಾರೆ. ಅವರು ಕೈ ಹಿಂಗೆ ಹಾಕಿದ್ದಾರಾ?, ಕಾಲು ಹಿಂಗೆ ಹಾಕಿದ್ದಾರೆ ಅಂತ ನಾವೇನು ಹೇಳಿದ್ದೇವಾ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.