ಅಖಾಡದಲ್ಲಿ ಹೈವೋಲ್ಟೇಜ್‌ ಕ್ಷೇತ್ರದಲ್ಲಿ ಗೆಲ್ಲೋರು ಯಾರು?: ಕೊರಟಗೆರೆ, ಬಬಲೇಶ್ವರ, ಹುಬ್ಬಳ್ಳಿ ಸೆಂಟ್ರಲ್‌ಗೆ ಬಾಸ್‌ ಯಾರು ?

ರಾಜ್ಯದಲ್ಲಿ ಈ ಬಾರಿ ಹಲವು ಹೈವೋಲ್ಟೇಜ್‌ ಕ್ಷೇತ್ರಗಳಿದ್ದು, ಇವುಗಳಲ್ಲಿನ ಅಭ್ಯರ್ಥಿಗಳ ಸೋಲು- ಗೆಲುವು ಇಡೀ ರಾಜಕಾರಣದ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇದೆ. 
 

First Published May 8, 2023, 1:04 PM IST | Last Updated May 8, 2023, 1:04 PM IST

ಮೇ.10 ರಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಬಾರಿ ತುಂಬಾ ಹೈವೋಲ್ಟೇಜ್ ಕ್ಷೇತ್ರಗಳು ಇವೆ. ಈ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳ ಸೋಲು ಹಾಗೂ ಗೆಲುವು ರಾಜ್ಯ ರಾಜಕಾರಣಕ್ಕೆ ಮಹತ್ವದ ಸಂದೇಶ ರವಾನೆ ಮಾಡಲಿದೆ. ಅಷ್ಟೇ ಅಲ್ಲದೇ ಹೈವೋಲ್ಟೇಜ್‌ ಕ್ಷೇತ್ರಗಳ ಮತದಾರರ ನಿಲುವು ಅಕ್ಕಪಕ್ಕದ ಕ್ಷೇತ್ರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮೊದಲನೇಯದಾಗಿ ವರುಣ ಹೈವೋಲ್ಟೇಜ್‌ ಕ್ಷೇತ್ರವಾಗಿದ್ದು, ಇದು ಕರ್ನಾಟಕದ ರಾಜಕಾರಣದ ದಿಕ್ಕನ್ನೇ ಬದಲಿಸಲಿದೆ. ನಂತರ ಚನ್ನಪಟ್ಟಣ ಇದ್ದು, ಅಲ್ಲಿ ಯೋಗೇಶ್ವರ್‌ ಕುಮಾರಸ್ವಾಮಿ ಟಕ್ಕರ್‌ ಕೊಡ್ತಾರಾ ಕಾದು ನೋಡಬೇಕಿದೆ. ಬಳಿಕ ಕೊರಟಗೆರೆ, ಬಬಲೇಶ್ವರ, ಹುಬ್ಬಳ್ಳಿ ಸೆಂಟ್ರಲ್‌ ಸಹ ಹೈವೋಲ್ಟೇಜ್‌ ಕ್ಷೇತ್ರಗಳಾಗಿವೆ. 

ಇದನ್ನೂ ವೀಕ್ಷಿಸಿ: Karnataka Election: ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ 6 ಗಂಟೆಗೆ ತೆರೆ

Video Top Stories