ಮೋದಿ ರೋಡ್‌ ಶೋಗೆ ತೊಂದರೆ ಮಾಡಲು ಕಾಂಗ್ರೆಸ್‌ ಷಡ್ಯಂತ್ರ: ಶೋಭಾ ಕರಂದ್ಲಾಜೆ ಗಂಭೀರ ಆರೋಪ

ಮೋದಿ ರೋಡ್‌ ಶೋಗೆ ತೊಂದರೆ ಮಾಡಲು ಷಡ್ಯಂತ್ರ
ಆಂಬುಲೆನ್ಸ್‌ ತಂದು ಜನರ ಮಧ್ಯೆ ನಿಲ್ಲಿಸುವ ಕುತಂತ್ರ
ಕಾಂಗ್ರೆಸ್‌ ವಿರುದ್ಧ ಶೋಭಾ ಕರಂದ್ಲಾಜೆ ಗಂಭೀರ ಆರೋಪ

First Published May 5, 2023, 3:00 PM IST | Last Updated May 5, 2023, 3:00 PM IST

ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಇದೀಗ ರೋಡ್ ಶೋ ರಾಜಕೀಯ ಶುರುವಾಗಿದೆ. ಮೋದಿ ರೋಡ್‌ ಶೋಗೆ ತೊಂದರೆ ಮಾಡಲು ಕಾಂಗ್ರೆಸ್‌ ಷಡ್ಯಂತ್ರ ಮಾಡಿದೆ ಎಂದು ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ. ಮೋದಿ ರೋಡ್ ಶೋ ವೇಳೆ ಕಾಂಗ್ರೆಸ್‌ನವರು ಷಡ್ಯಂತ್ರ ರೂಪಿಸುವ ಕುರಿತಾದ ಮಾಹಿತಿ ಇದೆ‌. ರೋಡ್‌ ಶೋ ವೇಳೆ ಆಂಬುಲೆನ್ಸ್ ಗಳನ್ನು ತರುವುದಕ್ಕೆ ಕಾಂಗ್ರೆಸ್ ಸಂಚು ಮಾಡಿದೆ ಎಂದು ಆರೋಪಿಸಿದರು. ಅಲ್ಲದೇ ಜನರ ಮಧ್ಯೆ ಆಂಬುಲೆನ್ಸ್‌ ಸಿಲುಕಿದೆ ಎಂದು ಬಿಂಬಿಸುವ ಪ್ರಯತ್ನ ಮಾಡಲು ಚಿಂತಿಸಿದ್ದಾರೆ ಎಂದು ಕಾಂಗ್ರೆಸ್‌ ವಿರುದ್ಧ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ. ಯಾವುದೇ ಆಂಬುಲೆನ್ಸ್ ಸಂಚಾರಕ್ಕೂ ತೊಂದರೆ ಆಗದಂತೆ ಅವಕಾಶ ಕಲ್ಪಿಸಲಾಗಿದೆ. ಆದ್ರೆ ಆಂಬುಲೆನ್ಸ್ ಗಳಲ್ಲಿ ರೋಗಿ ಇದ್ದಾರಾ? ಇಲ್ವಾ ಅಂತ ತಪಾಸಣೆ ಮಾಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ವೀಕ್ಷಿಸಿ: ಇಂದಿನಿಂದ 3 ದಿನ ಮೋದಿ ಮೆಗಾ ಟೂರ್‌ : ನಾಳೆ ಬಾದಾಮಿ, ಹಾವೇರಿಯಲ್ಲಿ ಬೃಹತ್‌ ಸಮಾವೇಶ

Video Top Stories