ಕಾಂಗ್ರೆಸ್‌ ಜವಾಹರ್ ಪಾಯಿಂಟ್, ಬಿಜೆಪಿಯಿಂದ ಶಿವ ಶಕ್ತಿ ಪಾಯಿಂಟ್ ನಾಮಕರಣ!

ಚಂದ್ರಯಾನ ಸ್ಥಳಕ್ಕೆ ಕಾಂಗ್ರೆಸ್ ಇಂದಿರಾ ಪಾಯಿಂಟ್, ರಾಜೀವ್ ಪಾಯಿಂಟ್ ಮಾಡುತ್ತಿತ್ತು, ತಿವಿದ ಬಿಜೆಪಿ,  ಆ.23 ರಾಷ್ಟ್ರೀಯ ಬಾಹ್ಯಾಕಾಶ ದಿನ, ಬಿಜೆಪಿ ನಾಯಕರ ಬೀದಿ ಪಾಲು ಎಂದು ಕಾಂಗ್ರೆಸ್ ಗೇಲಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

First Published Aug 26, 2023, 11:49 PM IST | Last Updated Aug 26, 2023, 11:49 PM IST

ಚಂದ್ರಯಾನ 3 ಯಶಸ್ಸಿಗೆ ಅಭಿನಂದನೆ ಸಲ್ಲಿಸಲು ಪ್ರಧಾನಿ ಮೋದಿ ಇಂದು ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಆಗಸ್ಟ್ 23ನೇ ದಿನಾಂಕ ಭಾರತ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಿದೆ ಎಂದು ಮೋದಿ ಘೋಷಿಸಿದ್ದಾರೆ. ಇದರ ಜೊತೆಗೆ ಇನ್ನೆರಡು ಘೋಷಣೆ ಮಾಡಿದ್ದಾರೆ. 2019ರಲ್ಲಿ ಚಂದ್ರಯಾನ 2 ಕ್ರಾಶ್ ಆದ ಸ್ಥಳಕ್ಕೆ ತಿರಂಗ ಎಂದು ಹೆಸರಿಟ್ಟರೆ, ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಆದ ಸ್ಥಳಕ್ಕೆ ಶಿವ ಶಕ್ತಿ ಎಂದು ಹೆಸರಿಡಲಾಗಿದೆ.  ಇದೀಗ ಬಿಜೆಪಿ ನಾಯಕರು ಕಾಂಗ್ರೆಸ್‌ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದರೆ ರಾಜೀವ್ ಪಾಯಿಂಟ್, ಇಂದಿರಾ ಪಾಯಿಂಟ್, ಸೋನಿಯಾ ಪಾಯಿಂಟ್ ಎಂದು ನಾಮಕರಣ ಮಾಡುತ್ತಿತ್ತು ಎಂದು ಬಿಜಪಿ ತಿರುಗೇಟು ನೀಡಿದೆ. ಇದಕ್ಕೆ ಕಾರಣ 2008ರಲ್ಲಿ ಚಂದ್ರಯಾನ 1 ಇಳಿದ ಸ್ಥಳಕ್ಕೆ ಕಾಂಗ್ರೆಸ್ ಜವಹಾರ್ ಪಾಯಿಂಟ್ ಎಂದು ಹೆಸರಿಟ್ಟಿದೆ.