Asianet Suvarna News Asianet Suvarna News

ಸಂಪುಟ ವಿಸ್ತರಣೆ: ಚನ್ನಪಟ್ಟಣದ ಸೈನಿಕನ ವಿರುದ್ಧ ತೊಡೆ ತಟ್ಟಿದ್ಯಾಕೆ ಹೊನ್ನಾಳಿ ಹುಲಿ.?

ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ್ದಕ್ಕೆ ಅಸಮಾಧಾನಗೊಂಡಿರುವ ರೇಣುಕಾಚಾರ್ಯ ನವದೆಹಲಿಗೆ ದೌಡಾಯಿಸಿ  ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ಭೇಟಿ ಮಾಡಿದ್ದಾರೆ. 
 

ಬೆಂಗಳೂರು (ಜ. 16): ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ್ದಕ್ಕೆ ಅಸಮಾಧಾನಗೊಂಡಿರುವ ರೇಣುಕಾಚಾರ್ಯ ನವದೆಹಲಿಗೆ ದೌಡಾಯಿಸಿ  ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ಭೇಟಿ ಮಾಡಿದ್ದಾರೆ. ಸಂಪುಟಕ್ಕೆ ನೂತನವಾಗಿ ಸೇರ್ಪಡೆಯಾಗಿರುವ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ವಿರುದ್ಧ ಭ್ರಷ್ಟಾಚಾರ ಮತ್ತು ವಂಚನೆಗಳ ಆರೋಪ ಮಾಡಿರುವ ಅವರು ಈ ಬಗ್ಗೆ ದಾಖಲೆಸಮೇತ ದೂರು ಸಲ್ಲಿಸಿದ್ದಾರೆ.

ಲಸಿಕೆ ಅಭಿಯಾನಕ್ಕೆ ಸಿಎಂ ಚಾಲನೆ, ವಿಕ್ಟೋರಿಯಾ, ಕಿಮ್ಸ್‌ನಲ್ಲಿ ಲಸಿಕೆ ವಿತರಣೆ ಆರಂಭ

ಸಿ.ಪಿ.ಯೋಗೇಶ್ವರ್‌ ಮೂರ್ನಾಲ್ಕು ತಿಂಗಳಲ್ಲಿ ನೂರಾರು ಕೋಟಿ ದುಡ್ಡು ಮಾಡಿದ್ದಾರೆ.  ಮಗಳಿಗಾಗಿ ಬಿಡದಿಯ ಬಳಿ 50ಕ್ಕೂ ಹೆಚ್ಚು ಎಕರೆ ಜಮೀನು ಖರೀದಿಸಿದ್ದಾರೆ.  ದೀಪಾವಳಿಗೆ ಅಂಥ ಕೋಟಿಗೊಂದರಂತೆ ನಾಲ್ಕು ಖರೀದಿಸಿದ್ದಾರೆ’ ಎಂದು ಆರೋಪಿಸಿದ್ದಾರೆ. ಹಾಗಾದರೆ ಈ ಆರೋಪದ ಸತ್ಯಾಸತ್ಯತೆ ಏನು..? 

Video Top Stories