ನಾನು ಕೆಜೆಪಿ ಕಟ್ಟಿದ್ದೆ, ಆದ್ರೆ ಕಾಂಗ್ರೆಸ್‌ ಸೇರಿರಲ್ಲಿಲ್ಲ: ಶೆಟ್ಟರ್‌ಗೆ ಬಿಎಸ್‌ವೈ ಟಾಂಗ್

ಶೆಟ್ಟರ್‌ ಬಿಜೆಪಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ
ದ್ರೋಹ ಮಾಡಿದವರನ್ನು ಜನ ಕ್ಷಮಿಸುವುದಿಲ್ಲ
ಜಗದೀಶ್‌ ಶೆಟ್ಟರ್‌ ವಿರುದ್ಧ ಬಿಎಸ್‌ವೈ ವಾಗ್ದಾಳಿ

First Published Apr 27, 2023, 11:21 AM IST | Last Updated Apr 27, 2023, 11:21 AM IST

ಜಗದೀಶ್‌ ಶೆಟ್ಟರ್‌ ವಿರುದ್ಧ ಬಿ.ಎಸ್‌.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಶೆಟ್ಟರ್‌ ಸೋಲಿಸುವಲ್ಲಿ ನಾವು ನೂರಕ್ಕೆ ನೂರು ಯಶಸ್ವಿಯಾಗುತ್ತೇವೆ. ವಿಶ್ವಾಸ ದ್ರೋಹ ಮಾಡಿರುವವರನ್ನು ಜನ ಕ್ಷಮಿಸುವುದಿಲ್ಲ ಎಂಬ ನಂಬಿಕೆ ನನಗೆ ಇದೆ. ಅವರಿಗೆ ಯಾವುದೇ ಅನ್ಯಾಯ ಮಾಡಿರಲಿಲ್ಲ, ಆದ್ರೂ ಅವರು ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ. ಇನ್ನೂ 2012-13ರಲ್ಲಿ ಯಡಿಯೂರಪ್ಪನವರು ಏನು ಮಾಡಿದ್ರು ಗೊತ್ತಲ್ಲ ಎಂಬ ಜಗದೀಶ್‌ ಶೆಟ್ಟರ್‌ ಪ್ರಶ್ನೆಗೆ ಉತ್ತರಿಸಿದ ಬಿಎಸ್‌ವೈ, ಹೌದು ನಾನು ಹೋಗಿದ್ದೆ. ಅದು ಅಪರಾಧ ಎಂದು ನಾನು ಕ್ಷಮೆಯನ್ನು ಕೇಳಿದ್ದೇನೆ. ನಾನು ಶೆಟ್ಟರ್‌ರಂತೆ ಕಾಂಗ್ರೆಸ್‌ಗೆ ಹೋಗಿಲ್ಲ. ಅವರು ಮತ್ತೆ ಬಿಜೆಪಿಗೆ ಬರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಯಡಿಯೂರಪ್ಪ ಕಿಡಿಕಾರಿದರು.

ಇದನ್ನೂ ವೀಕ್ಷಿಸಿ: News Hour: ಬಿಜೆಪಿ ಪಾಲಿಗೆ ಸವಾಲಿನ ಕ್ಷೇತ್ರವಾದ ಅಥಣಿ, ಹುಬ್ಬಳ್ಳಿ ಸೆಂಟ್ರಲ್‌!

Video Top Stories