Asianet Suvarna News Asianet Suvarna News

ಒಂದು ಇಂಚು ಜಾಗವನ್ನು ನೀಡಲ್ಲ: ಮಹಾರಾಷ್ಟ್ರದ ವಿರುದ್ಧ ಸಚಿವ ಸುಧಾಕರ್‌ ಕಿಡಿ

ಗಡಿ ಬದಲಿಸಲು ಆಗಲ್ಲ. ಒಂದು ಇಂಚು ಜಾಗವನ್ನು ನೀಡಲ್ಲ ಎಂದು ಮಹಾರಾಷ್ಟ್ರದ ಸರ್ಕಾರದ ವಿರುದ್ಧ  ಸಚಿವ ಸುಧಾಕರ್‌ ಕಿಡಿ ಕಾರಿದ್ದಾರೆ.
 

ಗಡಿ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರ ಮತ್ತೆ ಕ್ಯಾತೆ ತೆಗೆದಿದ್ದು, ಈ ವಿಚಾರವಾಗಿ ಸಚಿವ ಸುಧಾಕರ್ ಮಾತನಾಡಿದ್ದಾರೆ. ಗಡಿ ಬದಲಿಸಲು ಆಗಲ್ಲ. ಹಾಗೂ ಒಂದು ಇಂಚು ಜಾಗವನ್ನು ಕೂಡ ನೀಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ವಿಪಕ್ಷಗಳಿಗೆ ರಾಜಕಾರಣ ಹಾಗೂ ಚುನಾವಣೆ ಎರಡೇ ವಿಷಯ. ಗಡಿ ನೆಲ ಜಲ ವಿಚಾರ ಬಂದಾಗ ಎಲ್ಲರೂ ಒಂದಾಗಬೇಕು. ಗಡಿ ವಿಚಾರದಲ್ಲಿ  ಹೆಚ್‌.ಡಿ.ಕೆ ಹೇಳಿಕೆಗೆ ಸುಧಾಕರ್‌ ತಿರುಗೇಟು ನೀಡಿದ್ದು, ಅಂತರ್ ರಾಜ್ಯ ಸಂಬಂಧಗಳು ಚೆನ್ನಾಗಿರಬೇಕು. ಮಹಾರಾಷ್ಟ್ರದ ಸಾಕಷ್ಟು ಪ್ರದೇಶಗಳಲ್ಲಿ ಕನ್ನಡ ಮಾತನಾಡುತ್ತಾರೆ, ಆ ಪ್ರದೇಶಗಳು ಕರ್ನಾಟಕಕ್ಕೆ ವಿಸ್ತರಣೆ ಮಾಡಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.

Vokkaliga Reservation: ಒಕ್ಕಲಿಗ ಮೀಸಲಾತಿ ಹೆಚ್ಚಳಕ್ಕೆ ರಸ್ತೆಗಿಳಿಯಲೂ ಸಿದ್ಧ: ಸದಾನಂದಗೌಡ

Video Top Stories