ಚದುರಂಗದಾಟದಲ್ಲಿ ನಡೆ ಬದಲಿಸಿದ ಕೇಸರಿ ಪಡೆ: ಕೈ ವಿರುದ್ಧ ಬಿಜೆಪಿ ಕೌಂಟರ್ ಹಿಂದಿದೆ ಇಂಟ್ರೆಸ್ಟಿಂಗ್ ರಾಜನೀತಿ..!
ಆಪರೇಷನ್‌ಗೆ ಹೊಂಚು ಹಾಕಿದ್ದಾರೆ ಕೈ ಬೇಟೆಗಾರರು..!
ಬಿಜೆಪಿ ವಿರುದ್ದವೇ ತಿರುಗಿ ಬಿದ್ದಿದ್ದಾರೆ ರೆಬೆಲ್ ಸ್ಟಾರ್ಸ್..!
ಡ್ಯಾಮೇಜ್ ಕಂಟ್ರೋಲ್”ಗೆ ಕೇಸರಿ ಕೌಂಟರ್ ಯುದ್ಧ..!
ಕಾಂಗ್ರೆಸ್ ವಿರುದ್ಧ ಕೇಸರಿ ಕಲಿಗಳ ಫೈವ್ ಸ್ಟಾರ್ ಅಟ್ಯಾಕ್..!
ಒಂದು ಕಡೆ ಪ್ರಚಂಡ ಬಹುಮತದ ಕಾಂಗ್ರೆಸ್(Congress) ಸರ್ಕಾರ. ಮತ್ತೊಂದ್ಕಡೆ ವಿಧಾನಸಭಾ ಚುನಾವಣೆಯಲ್ಲಿ ಮಕಾಡೆ ಮಲಗಿದ್ದ ಬಿಜೆಪಿ(BJP). ಇನ್ನೊಂದೆಡೆ ಆಪರೇಷನ್ ಹಸ್ತದ ಅಬ್ಬರ, ಮತ್ತೊಂದ್ಕಡೆ ರೆಬೆಲ್‌ಗಳ ಕಾಟಕ್ಕೆ ಕೇಸರಿ ಪಡೆ ತತ್ತರ. ರಾಜ್ಯ ರಾಜಕಾರಣದಲ್ಲಿ ಸಾಮಾನ್ಯವಾಗಿ ಬಿಜೆಪಿ attacking modeನಲ್ಲಿರ್ತಾ ಇತ್ತು. ಕಾಂಗ್ರೆಸ್ defence modeನಲ್ಲಿರುತ್ತಿತ್ತು. ಆದ್ರೆ ಕರ್ನಾಟಕದಲ್ಲಿ ಇದು ಸಂಪೂರ್ಣ ಉಲ್ಟಾ. ಆಡಳಿತದಲ್ಲಿರೋ ಕಾಂಗ್ರೆಸ್ ಅಬ್ಬರಿಸ್ತಾ ಇದ್ರೆ, ಕೈ ಅಬ್ಬರದ ಮುಂದೆ ಕಮಲ ಪಡೆ ಮಂಕಾಗಿ ಹೋಗಿತ್ತು. ಕೊನೆಗೂ ನಿದ್ದೆಯಿಂದ ಎದ್ದಿರೋ ಕಮಲ ಪಡೆಯ ನಾಯಕರು ಕಾಂಗ್ರೆಸ್ ವಿರುದ್ಧ ಕೌಂಟರ್ ಅಟ್ಯಾಕ್ ಶುರು ಮಾಡಿದ್ದಾರೆ. ಸೋತು ಸುಣ್ಣವಾಗಿದ್ದವರಿಗೆ ಒಂದು ಗೆಲುವು ಆನೆಬಲ ತಂದುಕೊಡತ್ತೆ. ಅದೇ ರೀತಿ ಒಂಜು ಹೀನಾಯ ಸೋಲು ಗೆಲ್ತಾ ಇದ್ದವರ ಬುಡವನ್ನೇ ಅಲುಗಾಡಿಸಿ ಬಿಡತ್ತೆ. ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ನಂತ್ರ ಬಿಜೆಪಿ ಅಕ್ಷರಶಃ ತತ್ತರಿಸಿ ಹೋಗಿತ್ತು. ಎದುರಲ್ಲಿ 135 ಶಾಸಕರ ಪ್ರಚಂಡ ಶಕ್ತಿಯೊಂದಿಗೆ ಆರ್ಭಟಿಸ್ತಾ ಇರೋ ಕಾಂಗ್ರೆಸ್ ಸರ್ಕಾರ. ಕೈ ಸರ್ಕಾರಕ್ಕೆ ಸಿದ್ದರಾಮಯ್ಯ(Siddaramaiah)-ಡಿಕೆ ಶಿವಕುಮಾರ್(DK Shivakumar) ಜೋಡಿಯ ಸಮರ್ಥ ಸಾರಥ್ಯ. ಇಬ್ಬರೂ ಒಂದಾಗಿ ಒಗ್ಗಟ್ಟಿನಿಂದ ಬಿಜೆಪಿ ವಿರುದ್ಧ ನಿಂತಿದ್ದಾರೆ. ಒಗ್ಗಟ್ಟೇ ನಮ್ಮ ಶಕ್ತಿ ಅಂತ ಅಬ್ಬರಿಸ್ತಾ ಇದ್ದಾರೆ. ಒಗ್ಗಟ್ಟಿನ ಮಂತ್ರದ ಜೊತೆ ಗ್ಯಾರಂಟಿ ಅಸ್ತ್ರ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಶಕ್ತಿ ತಂದುಕೊಟ್ಟಿದೆ. ಪಂಚಗ್ಯಾರಂಟಿಗಳ ಪೈಕಿ ಈಗಾಗಲೇ 4ನ್ನು ಜಾರಿಗೆ ತಂದಿರೋ ಕೈ ಸರ್ಕಾರ, ಬಿಜೆಪಿಗೆ ಆಘಾತಗಳ ಮೇಲೆ ಆಘಾತ ಕೊಡ್ತಾ ಇದೆ. ಇದ್ರ ಮಧ್ಯೆ ಆಪರೇಷನ್ ಹಸ್ತ ಶುರು ಮಾಡಿ ಬೇಟೆಗೆ ಹೊಂಚು ಹಾಕಿ ಕೂತಿದ್ದಾರೆ ಕಾಂಗ್ರೆಸ್‌ನ ರಣಬೇಟೆಗಾರರು.
ಇದನ್ನೂ ವೀಕ್ಷಿಸಿ: ಬರ ಪರಿಸ್ಥಿತಿಯಲ್ಲಿ ವಿಜಯಪುರ ರೈತರಿಗೆ ಮತ್ತೊಂದು ಬರೆ: ಡ್ಯಾಂನಿಂದ ಕೆನಾಲ್‌ಗೆ ಬಿಟ್ಟರು ಜಮೀನು ಸೇರದ ನೀರು..!