BIG3: ಸಿಲಿಕಾನ್ ಸಿಟಿ ಬೆಂಗಳೂರಿನ ಆರೋಗ್ಯ ಕೇಂದ್ರಗಳಲ್ಲಿ ಔಷಧಿ ಕೊರತೆ..!

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರಿಯಾದ ಸಮಯಕ್ಕೆ ಅಧಿಕಾರಿಗಳು ಔಷಧಿಗಳನ್ನ ಸರಬರಾಜು ಮಾಡ್ತಿಲ್ಲ. ಸರಿಯಾದ ಸಮಯಕ್ಕೆ ಔಷಧಿಗಳು ಸಿಗದೇ ರೋಗಿಗಳು, ಹಿರಿಯ ನಾಗರೀಕರು ಪರ ದಾಡುವಂತ ಸ್ಥಿತಿ ನಿರ್ಮಾಣ ವಾಗಿದೆ.

First Published Mar 7, 2023, 1:40 PM IST | Last Updated Mar 7, 2023, 1:40 PM IST

ಬೆಂಗಳೂರು (ಮಾ.07): ಬಡವರಿಗೆ ಸರ್ಕಾರಿ ಆಸ್ಪತ್ರೆನೇ ಸಂಜೀವಿನಿ. ಆದರೆ ಅದೇ ಸಂಜೀವಿನಿ ಆಸ್ಪತ್ರೆಗೆ ಬಡವರು ಹೋದರೂ ಉಪಯೋಗ ಆಗುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರಿಯಾದ ಸಮಯಕ್ಕೆ ಅಧಿಕಾರಿಗಳು ಔಷಧಿಗಳನ್ನ ಸರಬರಾಜು ಮಾಡ್ತಿಲ್ಲ. ಸರಿಯಾದ ಸಮಯಕ್ಕೆ ಔಷಧಿಗಳು ಸಿಗದೇ ರೋಗಿಗಳು, ಹಿರಿಯ ನಾಗರೀಕರು ಪರ ದಾಡುವಂತ ಸ್ಥಿತಿ ನಿರ್ಮಾಣ ವಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನ ಆರೋಗ್ಯ ಕೇಂದ್ರಗಳಲ್ಲಿ ಔಷಧಿ ಕೊರತೆ ಉಂಟಾಗಿದ್ಯಾ? ಅನ್ನೋದಕ್ಕೆ ಈ ದೃಶ್ಯವೇ ಸಾಕ್ಷಿಯಾಗಿದೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ 138 ನೇ ವಾರ್ಡ್‌ನ ಅಂಜನಪ್ಪ ಗಾರ್ಡನ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಐದು ತಿಂಗಳಿನಿಂದ ಸಿಗುತ್ತಿಲ್ಲ. ಈ ಆಸ್ಪತ್ರೆಗೆ ಅಧಿಕಾರಿಗಳು ಸರಿಯಾಗಿ ಔಷಧಿಗಳನ್ನು ಸರಬರಾಜು ಮಾಡುತ್ತಿಲ್ಲ. ಆದ್ದರಿಂದ ಬಡ ರೋಗಿಗಳು ಪರಿತಪಿಸುವಂತಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೋದವರಿಗೆ ಮಾತ್ರೆಗಳಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನು ವೃದ್ಧರಿಗೆ ಅಗತ್ಯವಾಗಿರುವ ಶುಗರ್, ಬಿಪಿ ಮಾತ್ರೆ ಖಾಲಿಯಾಗಿ ನಾಲ್ಕು ತಿಂಗಳು ಕಳೆದಿದೆ.

ಕ್ಯಾರೇ ಎನ್ನದ ಹಿರಿಯ ಅಧಿಕಾರಿಗಳು: ಪ್ರಾಥಮಿಕ ಆರೋಗ್ಯ ಕೇಂದ್ರದ ಔಷಧಿ ಕೊರತೆ ಆಗಿರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಈ ಬಗ್ಗೆ ಯಾರೊಬ್ಬರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರಯೋಜನವಾಗಿಲ್ಲ. ಕಳೆದ ನಾಲ್ಕೈದು ಬಾರಿ ನಾನೇ ಔಷಧಿಗಳನ್ನು ಖಾಸಗಿಯಾಗಿ ಖರೀದಿಸಿ ಆಸ್ಪ ತ್ರೆಗೆ ಕೊಟ್ಟಿದ್ದೇನೆ. ಆದರೂ ಸಮಸ್ಯೆಯನ್ನು ಅಧಿಕಾರಿಗಳು ಬಗೆಹರಿಸಿಲ್ಲ ಎಂದು ಸ್ಥಳೀಯ ಮುಖಂಡ ಸುನೀಲ್ ವೆಂಕಟೇಶ್ ಹೇಳಿದ್ದಾರೆ. ಔಷಧಿ ಕೊರತೆ ಆಗಿರುವ ಬಗ್ಗೆ ‌ಮಾಹಿತಿ ಪಡೆದುಕೊಂಡ ಏಷ್ಯಾನೆಟ್ ಸುವರ್ಣ ನ್ಯೂಸ್ ತಂಡ ಪ್ರಾ ಥಮಿಕ ‌ಆರೋಗ್ಯ ಕೇಂದ್ರಕ್ಕೆ ಹೋದ ಸಂದರ್ಭದಲ್ಲಿ ಮಕ್ಕಳಿಗೂ ಸಹ ಆಸ್ಪತ್ರೆಯಲ್ಲಿ ಕೊಡಲು ಔಷಧಿಗಳು ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

Video Top Stories