Asianet Suvarna News Asianet Suvarna News

ತಮಿಳುನಾಡಿನಲ್ಲಿ ಬಿಜೆಪಿ 200 ದಿನದ ಪಾದಯಾತ್ರೆ, ಅಣ್ಣಾಮಲೈ ಆಂದೋಲನಕ್ಕೆ ಅಮಿತ್ ಶಾ ಚಾಲನೆ!

ತಮಿಳುನಾಡಿನಲ್ಲಿ ಅಣ್ಣಾಮಲೈ ನೇತೃತ್ವದ ಬಿಜೆಪಿ ಬೃಹತ್ ಪಾದಯಾತ್ರೆ ಆರಂಭಗೊಂಡಿದೆ. ಈ ಪಾದಯಾತ್ರೆಗೆ ಅಮಿತ್ ಶಾ ಚಾಲನೆ ನೀಡಿದ್ದಾರೆ. 200 ದಿನಗಳ ಕಾಲ ನಡೆಯಲಿರುವ ಈ ಪಾದಯಾತ್ರೆ ಅಬ್ಬರ ಆರಂಭಗೊಂಡಿದೆ.

ರಾಮೇಶ್ವರಂ(ಜು.29) ತಮಿಳುನಾಡು ಬಿಜೆಪಿಯಲ್ಲಿ ಹೊಸ ಹುರುಪು ಚಿಮ್ಮುತ್ತಿದೆ. ಅಣ್ಣಾಮಲೈ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅಣ್ಣಾಮಲೈ ಇದೀಗ ಬೃಹತ್ ಪಾದಯಾತ್ರೆ ಆರಂಭಿಸಿದ್ದಾರೆ. ರಾಮೇಶ್ವರಂನಿಂದ ಆರಂಭಗೊಂಡ ಈ ಪಾದಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ್ದಾರೆ. ಬರೋಬ್ಬರಿ 200 ದಿನ ನಡೆಯಲಿರುವ ಈ ಪಾದಯಾತ್ರೆ ಬರೋಬ್ಬರಿ 1,700 ಕಿಲೋಮೀಟರ್ ಸಾಗಲಿದೆ. ಈ ಬೃಹತ್ ಯಾತ್ರೆ ಆರಂಭಗೊಂಡಿದ್ದು, ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಈ ಬಾರಿ ಇತಿಹಾಸ ರಚಿಸಲು ಸಜ್ಜಾಗಿದೆ.
 

Video Top Stories