Asianet Suvarna News Asianet Suvarna News

ಯಡಿಯೂರಪ್ಪ ಫುಲ್ ಆ್ಯಕ್ಟಿವ್: ಉಪಚುನಾವಣೆ ಉಸ್ತುವಾರಿಗಳಿಗೆ ಹೊಸ ಟಾಸ್ಕ್

Nov 30, 2019, 4:34 PM IST

ಬೆಂಗಳೂರು, (ನ.30): ಉಪಚುನಾವಣೆಯಲ್ಲಿ ಬಿಜೆಪಿ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ" ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಆಂತರಿಕ ಸಮೀಕ್ಷೆ ಬೇರೆಯದ್ದೇ ಕಥೆ ಹೇಳುತ್ತಿದೆ.

 ಉಪಚುನಾವಣೆಯಲ್ಲಿ 15 ಕ್ಷೇತ್ರಗಳ  ಪೈಕಿ 6 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿಗೆ ಗೆಲುವು ಸುಲಭ ಎಂಬ ಆಂತರಿಕ ಸಮೀಕ್ಷೆ ವರದಿ ನೀಡಿದೆ. ಇನ್ನಷ್ಟು ಶ್ರಮವಹಿಸಿದರೆ, ಇನ್ನೂ ಮೂರ್ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎನ್ನುವ ವರದಿ ಯಡಿಯೂರಪ್ಪ ಕೈ ಸೇರಿದೆ. 

ಈ ಹಿನ್ನೆಲೆಯಲ್ಲಿ ಮತ್ತಷ್ಟು  ಫುಲ್ ಆ್ಯಕ್ಟಿವ್ ಆಗಿರುವ ಬಿಎಸ್‌ವೈ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಪ್ರಚಾರದಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲದೇ ಉಪಚುನಾವಣೆ ಉಸ್ತುವಾರಿಗಳಿಗೆ ಹೊಸ ಟಾಸ್ಕ್ ಕೊಟ್ಟಿದ್ದಾರೆ. ಏನದು ಟಾಸ್ಕ್..? ವಿಶ್ಲೇಷಣಾತ್ಮ ವರದಿಯನ್ನು ವಿಡಿಯೋನಲ್ಲಿ ನೋಡಿ.

ಇದೇ ಡಿಸೆಂಬರ್ 5ರಂದು ಮತದಾನ ನಡೆಯಲಿದ್ದು, ಡಿ.9ಕ್ಕೆ ಫಲಿತಾಂಶ ಹೊರಬೀಳಲಿದೆ.