ಖಾಸಗಿ ಆಸ್ಪತ್ರೆಗಳ ಮೇಲೆ ಚಾಟಿ ಬೀಸಿದ ಅಧಿಕಾರಿಗಳು..!

ನಗರದ  5 ಖಾಸಗಿ ಆಸ್ಪತ್ರೆಗಳಾದ ವೈಟ್‌ ಫೀಲ್ಡ್ ಕೊಲಂಬಿಯಾ ಏಷ್ಯಾ, ಸಾಕ್ರ, ಯಶೋಮತಿ, ಸರ್ಜಾಪುರದ ಕೊಲಂಬಿಯಾ ಏಷ್ಯಾ ಹಾಗೂ ವೈದೇಹಿ ಆಸ್ಪತ್ರೆಗಳ ಮೇಲೆ ಸುನಿಲ್ ಅಗರ್ವಾಲ್ ಹಾಗೂ ಉಮಾ ಮಹದೇವನ್ ಅವರನ್ನೊಳಗೊಂಡ ತಂಡ ದಿಢೀರ್ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ.

First Published Jul 30, 2020, 10:59 AM IST | Last Updated Jul 30, 2020, 10:59 AM IST

ಬೆಂಗಳೂರು(ಜು.30): ರೋಗಿಗಳ ಬಳಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ ಆಸ್ಪತ್ರೆಗಳ ಆಡಳಿತ ಮಂಡಳಿಯನ್ನು ಫುಲ್ ಡ್ರಿಲ್ ನಡೆಸಿದೆ. 

ನಗರದ  5 ಖಾಸಗಿ ಆಸ್ಪತ್ರೆಗಳಾದ ವೈಟ್‌ ಫೀಲ್ಡ್ ಕೊಲಂಬಿಯಾ ಏಷ್ಯಾ, ಸಾಕ್ರ, ಯಶೋಮತಿ, ಸರ್ಜಾಪುರದ ಕೊಲಂಬಿಯಾ ಏಷ್ಯಾ ಹಾಗೂ ವೈದೇಹಿ ಆಸ್ಪತ್ರೆಗಳ ಮೇಲೆ ಸುನಿಲ್ ಅಗರ್ವಾಲ್ ಹಾಗೂ ಉಮಾ ಮಹದೇವನ್ ಅವರನ್ನೊಳಗೊಂಡ ತಂಡ ದಿಢೀರ್ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ.

ಕೊರೋನಾ ವಿರುದ್ಧ ಹೋರಾಟ: ಬೆಂಗಳೂರಲ್ಲಿ 30000 ಬೆಡ್‌ ವ್ಯವಸ್ಥೆ, ಅಶ್ವತ್ಥ ನಾರಾಯಣ

ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಅಧಿಕ ಹಣ ಸುಲಿಗೆ ವಸೂಲಿ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದ ಹಿನ್ನೆಯಲ್ಲಿ ಈ ದಾಳಿ ನಡೆದಿದೆ. 14 ರೋಗಿಗಳಿಂದ 5 ಲಕ್ಷ ರುಪಾಯಿಗೂ ಅಧಿಕ ಹಣ ವಸೂಲಿ ಮಾಡಿದ ಆರೋಪ ಈ ಖಾಸಗಿ ಆಸ್ಪತ್ರೆಗಳ ಮೇಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.