Asianet Suvarna News Asianet Suvarna News

ಹಲೋ ಬ್ರದರ್! ಅತೃಪ್ತ ಶಾಸಕರಿಗೆ ಅಮೆರಿಕಾದಿಂದ ಸಿಎಂ ವಾಟ್ಸಪ್ ಕಾಲ್

Jul 1, 2019, 8:33 PM IST

ಬೆಂಗಳೂರು (ಜು.01): ಜಿಂದಾಲ್‌ಗೆ ಭೂಮಿ ನೀಡುವ ವಿಚಾರವಾಗಿ ಸರ್ಕಾರದ ಜೊತೆ ಮುನಿಸಿಕೊಂಡಿರುವ  ವಿಜಯನಗರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ವಿಧಾನಸಭಾ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದ್ದಾರೆ.   

ಆನಂದ್ ಸಿಂಗ್ ಬೆನ್ನಲ್ಲೇ ಕಾಂಗ್ರೆಸ್‌ನ ಇನ್ನೋರ್ವ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಕೂಡಾ ನಾಳೆ ಸ್ಪೀಕರ್‌ಗೆ ಭೇಟಿಯಾಗಿ ರಾಜೀನಾಮೆ ನೀಡೋದಾಗಿ ಹೇಳಿದ್ದಾರೆ. 

ರಾಜ್ಯದಲ್ಲಿ ಘಟಿಸುತ್ತಿರುವ ದಿಢೀರ್ ಬೆಳವಣಿಗೆಗಳಿಂದ ಅಮೆರಿಕಾ ಪ್ರವಾಸದಲ್ಲಿರುವ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸರ್ಕಾರ ಉಳಿಸುವ ಕಸರತ್ತು ಆರಂಭಿಸಿದ್ದಾರೆ.  ಅತೃಪ್ತ ಶಾಸಕರಿಗೆ ಕರೆ ಮಾಡಿ ಮಾತನಾಡಿರುವ ಸಿಎಂ ಏನು ಹೇಳಿದ್ದಾರೆ ನೋಡೋಣ ಈ ಸ್ಟೋರಿಯಲ್ಲಿ...