Asianet Suvarna News Asianet Suvarna News

ಬಿಗ್‌-3: ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾದರೂ ಅಲೆಮಾರಿಗಳಿಗೆ ಸಿಕ್ಕಿಲ್ಲ ಸ್ವಂತ ಸೂರು..! ಇದು ಯಾರ ತಪ್ಪು?

ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದೆ, ಈ ಕುಟುಂಬಗಳ ಮೂರು ತೆಲೆ ಮಾರಿನವರು ಮರಣ ಹೊಂದಿದ್ರು ಸಹ ಇನ್ನು ಇವರಿಗೆ ಮಾತ್ರ ಸರ್ಕಾರದಿಂದ ಸಿಗಬೇಕಾದ ಕನಿಷ್ಠ ಸೌಲಭ್ಯಗಳು ಸಿಗ್ತಿಲ್ಲ.

ಕೋಲಾರ (ಜು.31): ಪ್ರಧಾನಿ ನರೇಂದ್ರ ಮೋದಿಯವರು ಕಟ್ಟ ಕಡೆಯ ಜನರಿಗೂ ಸರ್ಕಾರಿ ಸೌಲಭ್ಯ ಕಲ್ಪಿಸಬೇಕು ಅನ್ನೋ ಕನಸು ಕಂಡಿದ್ದರು. ಬಡವರಿಗಾಗಿ ರಾಜ್ಯ ಸರ್ಕಾರಗಳು ನೂರಾರು ಯೋಜನೆ ಜಾರಿಗೆ ತಂದಿವೆ. ಆದ್ರೆ, ಸ್ವಾತಂತ್ರ್ಯ ಬಂದು 75 ವರ್ಷ ಆದ್ರೂ ಅವರನ್ನ ಇನ್ನೂ ಹಾಗೇ ಇಟ್ಟಿದ್ದಾರೆ ಈ ರಾಜಕಾರಣಿಗಳು, ಅಧಿಕಾರಿಗಳು. ಅಷ್ಟಕ್ಕೂ ಏನದು ಸ್ಟೋರಿ ಗೊತ್ತಾ..? ಈ ಸ್ಪೆಷಲ್ ರಿಪೋರ್ಟ್ ನೋಡಿ...

ಬೆಂಗಳೂರಿನಿಂದ  ಕೇವಲ 60 ಕಿಲೋ ಮೀಟರ್ ದೂರದಲ್ಲಿರುವ ಗ್ರಾಮ. ಆದ್ರೂ, ಸಹ ಇನ್ನೂ ಅಲ್ಲಿನ ಅನಾಗರಿಕ ಪದ್ದತಿ ದೂರವಾಗಿಲ್ಲ.ಆ ಗ್ರಾಮದ ಹೋಬಳಿಯಲ್ಲೇ ಹುಟ್ಟಿ ಬೆಳೆದಿರುವ ಈಗಲೂ ಶಾಸಕರು,ಸಂಸದರು ಆಗಿರುವವರು ಸಹ ಅವರ ಸಮಸ್ಯೆ ಬಗೆಹರಿಸಿಲ್ಲ. ಅದಕ್ಕೆ ಈ ದೃಶ್ಯಗಳೇ ಸಾಕ್ಷಿ.. ಜೋರಾಗಿ ಗಾಳಿ, ಮಳೆ ಬಂದ್ರೆ ಹಾರಿ ಹೋಗುವಂತಿರೋ ಗುಡಿಸಲುಗಳು. ಆತಂಕ,ಭಯದಲ್ಲೇ ಗುಡಿಸಲಿನ ಒಳಗೆ ಕೂತಿರೋ ಹೆಂಗಸರು ಹಾಗೂ ಮಕ್ಕಳು. ದೂರದ ಕೆರೆಯಿಂದ ಸರ್ಕಸ್ ಮಾಡಿಕೊಂಡು ನೀರು ತರುತ್ತಿರೋ ಜನ ಜೊತೆಗ ವಿಷ ಜಂತುಗಳ ಕಾಟವೂ ಹೆಚ್ಚಾಗಿದೆ. ಅಂದಹಾಗೆ, ಇವೆಲ್ಲ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ನೂಟವೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಪೆಮ್ಮನದೊಡ್ಡಿ ಅನ್ನೋ ಗ್ರಾಮದಲ್ಲಿ. ಐದಾರು ಕುಟುಂಬದ ಸುಮಾರು 50 ಜನರು ಇಂದಿಗೂ ಯಾವುದೇ ಮೂಲಭೂತ ಸೌಲಭ್ಯ ಇಲ್ಲದೇ ಈ ರೀತಿ ಜೀವನ ನಡೆಸುತ್ತಿದ್ದಾರೆ.

ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದೆ, ಈ ಕುಟುಂಬಗಳ ಮೂರು ತೆಲೆ ಮಾರಿನವರು ಮರಣ ಹೊಂದಿದ್ರು ಸಹ ಇನ್ನು ಇವರಿಗೆ ಮಾತ್ರ ಸರ್ಕಾರದಿಂದ ಸಿಗಬೇಕಾದ ಕನಿಷ್ಠ ಸೌಲಭ್ಯಗಳು ಸಿಗ್ತಿಲ್ಲ. ಬೇರೆಯವರ ತೋಟಗಳಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಅಂದ್ರೆ ಇವರ ಎಲ್ಲರ ಬಳಿ ಆಧಾರ್, ರೇಷನ್ ಕಾರ್ಡ್, ವೋಟರ್ ಐಡಿಗಳಿವೆ. ವೋಟು ಕೂಡ ಹಾಕ್ತಾರೆ. ವೋಟು ಹಾಕಿದ ಮೇಲೆ ಈ ಕಡೇ ತಿರುಗಿ ಕೂಡ ಜನಪ್ರತಿನಿಧಿಗಳು ನೋಡಲ್ಲ. ಇನ್ನೂ ದೊಡ್ಡ ಆಶ್ಚರ್ಯ ಸಂಗತಿ ಅಂದ್ರೆ ಸತತ ಎರಡು ಬಾರಿ ಗೆದ್ದಿರುವ ಹಾಲಿ ಶಾಸಕ ಕೆ.ವೈ ನಂಜೇಗೌಡ ಹಾಗೂ ಹಾಲಿ ಸಂಸದ ಮುನಿಸ್ವಾಮಿ ಇದೆ ಪಂಚಾಯ್ತಿಗೆ ಸೇರಿರುವವರು ಅನ್ನೋದು. 

ಈ ಕುಟುಂಬದವರು ನೂಟವೆ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ, ಸ್ಥಳೀಯ ಶಾಸಕರಿಗೆ, ಪಂಚಾಯ್ತಿ ಸದಸ್ಯರಿಗೆ ಮನವಿ ಮಾಡಿ ಕಚೇರಿಗಳಿಗೆ ಅಲೆದಾಡಿ ಚಪ್ಪಲಿ ಸವೆಸಿದ್ರು ಇಂದಿಗೂ ಯಾರು ಕ್ಯಾರೆ ಅನ್ನುತ್ತಿಲ್ಲ. ಯಾಕಂದ್ರೆ, ಇವರೆಲ್ಲ ಬಡವರು ಅಲ್ವಾ.? ಆದ್ರೆ, ಬಿಗ್3 ಇವತ್ತು ಸಂಬಂಧಪಟ್ಟವರ ಮೈ ಚಳಿ ಬಿಡಿಸೋದು ಪಕ್ಕಾ.. ಕ್ಯಾಮರಾಮನ್ ಶ್ರೀನಿವಾಸ್ ಜೊತೆ ದೀಪಕ್ ಏಷ್ಯಾನೆಟ್ ಸುವರ್ಣನ್ಯೂಸ್ ಕೋಲಾರ

Video Top Stories