Asianet Suvarna News Asianet Suvarna News

ವಿಜಯಪುರದಲ್ಲಿ ಸುದೀಪ್‌ ಅಭಿಮಾನಿಗಳ ಆಕ್ರೋಶ: ಥಿಯೇಟರ್‌ ಮೇಲೆ ಕಲ್ಲು ತೂರಾಟ

Oct 14, 2021, 2:34 PM IST

ವಿಜಯಪುರ(ಅ.14): ವಿಜಯಪುರದಲ್ಲಿ ಕಿಚ್ಚು ಹತ್ತಿಸಿದ್ದಾರೆ ಕಿಚ್ಚನ ಅಭಿಮಾನಿಗಳು. ಹೌದು, ಸುದೀಪ್‌ ಅಭಿನಯದ ಕೋಟಿಗೊಬ್ಬ 3 ಚಿತ್ರ ಇಂದು(ಗುರುವಾರ) ಬಿಡುಗಡೆಯಾಗಬೇಕಿತ್ತು ಆದರೆ ಇಂದು ರಿಲೀಸ್‌ ಆಗಿಲ್ಲ. ಹೀಗಾಗಿ ಆಕ್ರೋಶಗೊಂಡ ಅಭಿಮಾನಿಗಳು ನಗರದ ಡ್ರೀಮ್‌ಲ್ಯಾಂಡ್‌ ಚಿತ್ರಮಂದಿರಕ್ಕೆ ಕಲ್ಲು ತೂರಾಟ ನಡೆಸಿದ್ದಾರೆ. ಕೋಟಿಗೊಬ್ಬ 3 ಚಿತ್ರ ಇಂದು ರಿಲೀಸ್‌ ಆಗದಿದ್ದಕ್ಕೆ ಕಿಚ್ಚನ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಹೀಗಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಜನರನ್ನ ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಅಭಿಮಾನಿಗಳ ಕಲ್ಲೇಟಿಗೆ ಚಿತ್ರಮಂದಿರದ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ.  

ಸುದೀಪ್ 'ಕೋಟಿಗೊಬ್ಬ 3' ಸಿನಿಮಾ ಇಂದು ಬಿಡುಗಡೆ ಇಲ್ಲ; ಕ್ಷಮೆ ಕೇಳಿದ ಚಿತ್ರತಂಡ