Asianet Suvarna News Asianet Suvarna News

ಬೆಂಗಳೂರಲ್ಲಿ KGF 2 ಲೇಡಿಸ್‌ ಸ್ಪೇಷಲ್‌ ಶೋ: ಹೆಜ್ಜೆ ಹಾಕಿ ಸಂಭ್ರಮಿಸಿದ ಮಹಿಳೆಯರು

ಕೆಜಿಎಫ್ 2 (KGF 2) ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ನೋಡಲು ಅಭಿಮಾನಿಗಳು ಮುಗಿ ಬೀಳುತ್ತಿದ್ದಾರೆ. ಸಿನಿಮಾ ದೊಡ್ಡ ಮಟ್ಟದ ಹವಾವನ್ನೇ ಸೃಷ್ಟಿಸಿದೆ. 

First Published Apr 14, 2022, 3:29 PM IST | Last Updated Apr 14, 2022, 3:41 PM IST

ಕೆಜಿಎಫ್ 2 (KGF 2) ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ನೋಡಲು ಅಭಿಮಾನಿಗಳು ಮುಗಿ ಬೀಳುತ್ತಿದ್ದಾರೆ. ಸಿನಿಮಾ ದೊಡ್ಡ ಮಟ್ಟದ ಹವಾವನ್ನೇ ಸೃಷ್ಟಿಸಿದೆ. ಕೆಂಗೇರಿಯ (Kengeri) ವೆಂಕಟೇಶ್ವರ ಥಿಯೇಟರ್‌ನಲ್ಲಿ ಮಹಿಳೆಯರಿಗಾಗಿಯೇ (Ladies Special)ವಿಶೇಷ ಕೆಜಿಎಫ್ ಶೋ ಇಡಲಾಗಿತ್ತು. ಈ ಸಂದರ್ಭದಲ್ಲಿ ಮಹಿಳೆಯರು ಕುಣಿದು ಕುಪ್ಪಳಿಸಿದ್ದಾರೆ. 

KGF 2 ಗೂ ತಪ್ಪಿಲ್ಲ ಪೈರಸಿ ಕಾಟ; Online ನಲ್ಲಿ ಹರಿದಾಡುತ್ತಿದೆ ರಾಕಿಭಾಯ್ ಸಿನಿಮಾ

ಬೆಂಗಳೂರಿನ ಊರ್ವಶಿ, ಮೈಸೂರಿನ ಡಿಸಿಆರ್‌ ಸೇರಿದಂತೆ ರಾಜ್ಯದ ಹಲವು ಥಿಯೇಟರ್‌ನಲ್ಲಿ (Theatre) ಕೆಜಿಎಫ್‌-2 (KGF 2)  ಸಿನಿಮಾ ಬುಧವಾರ ರಾತ್ರಿ 12 ಗಂಟೆಗೇ ಮೊದಲ ಪ್ರದರ್ಶನ ಕಂಡಿದೆ. ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲೂ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಬೃಹತ್‌ ಕಟೌಟ್‌ಗಳು ರಾರಾಜಿಸುತ್ತಿವೆ. ಡೊಳ್ಳು ಕುಣಿತ, ಹೂವಿನ ಹಾರಗಳ ಅಲಂಕಾರದಿಂದ ಚಿತ್ರಮಂದಿರಗಳ ಮುಂದೆ ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಬೆಂಗಳೂರಿನ ಹೆಚ್ಚಿನೆಲ್ಲ ಥಿಯೇಟರ್‌ಗಳಲ್ಲಿ ಯಶ್‌ ಕಟೌಟ್‌, ಪೋಸ್ಟರ್‌ಗಳು ಗಮನಸೆಳೆಯುತ್ತಿವೆ.