Asianet Suvarna News Asianet Suvarna News

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಭಾ ಮಾ ಹರೀಶ್ ಅಯ್ಕೆ

ಬೆಂಗಳೂರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Film Chamber)  2022 ಹಾಗೂ 23ನೇ ಸಾಲಿನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಹಿರಿಯ ನಿರ್ಮಾಪಕ ಭಾ. ಮ.ಹರೀಶ್‌ (Bhama Harish) ಅವರು ಅತ್ಯಧಿಕ ಮತಗಳಿಂದ ಜಯಗಳಿಸಿದ್ದಾರೆ.

ಬೆಂಗಳೂರು (ಮೇ. 29):  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Film Chamber)  2022 ಹಾಗೂ 23ನೇ ಸಾಲಿನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಹಿರಿಯ ನಿರ್ಮಾಪಕ ಭಾ. ಮ.ಹರೀಶ್‌ (Bhama Harish) ಅವರು ಅತ್ಯಧಿಕ ಮತಗಳಿಂದ ಜಯಗಳಿಸಿದ್ದಾರೆ.

ಮಾರಾಟಕ್ಕೆ ರೆಡಿಯಾಗಿತ್ತಾ ಪೀರ್‌ಪಾಷ ಮಸೀದಿ? ಸ್ಫೋಟಕ ಮಾಹಿತಿ ಹೊರಹಾಕಿದ ಸ್ವಾಮೀಜಿ..!

ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಭಾ.ಮ.ಹರೀಶ್‌ ಹಾಗೂ ಸಾರಾ ಗೋವಿಂದು ಇಬ್ಬರೂ ಸ್ಪರ್ಧಿಸಿದ್ದರಿಂದ ಕಳೆದ ವರ್ಷಕ್ಕಿಂತಲೂ ಈ ಬಾರಿ ಚುನಾವಣೆಯ ಕಾವು ಜೋರಾಗಿತ್ತು. ಇಬ್ಬರ ನಡುವೆ ಪ್ರಬಲ ಸ್ಪರ್ಧೆ ನಡೆದು ಕೊನೆಗೆ 781 ಮತಗಳನ್ನು ಪಡೆಯುವ ಮೂಲಕ 403 ಮತಗಳ ಅಂತರದಿಂದ ಸಾರಾ ಗೋವಿಂದು ಅವರನ್ನು ಸೋಲಿಸಿ, ಭಾ.ಮ.ಹರೀಶ್‌ ಅವರು ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೇರಿದರು. ಇನ್ನು ಭಾ.ಮ.ಹರೀಶ್‌ ಅವರ ಬೆಂಬಲಿತ ಅಭ್ಯರ್ಥಿಗಳಾಗಿ ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ವಲಯದಿಂದ ಹಿರಿಯ ನಟ ಜೈ ಜಗದೀಶ್‌ ಹಾಗೂ ವಿತರಕರ ವಲಯದಿಂದ ಶಿಲ್ಪಾ ಶ್ರೀನಿವಾಸ್‌ ಎಚ್‌.ಸಿ. ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Video Top Stories