ಮಾರಾಟಕ್ಕೆ ರೆಡಿಯಾಗಿತ್ತಾ ಪೀರ್‌ಪಾಷ ಮಸೀದಿ?: ಸ್ಫೋಟಕ ಮಾಹಿತಿ ಹೊರಹಾಕಿದ ಸ್ವಾಮೀಜಿ..!
* ಮಸೀದಿ ಮಾರಾಟಕ್ಕೆ ಮುಂದಾಗಿದ್ದ ನವಾಬ ಮನೆತನ
* ಮಸೀದಿ ಖರೀದಿಗೆ ಮುಂದಾಗಿದ್ದ ಮಾತೆ ಮಹಾದೇವಿ
* ಮಾತೆ ಮಹಾದೇವಿ ಬಳಿ 3 ಕೋಟಿ ಭರಿಸಲು ಆಗಲಿಲ್ಲ
ಬೆಳಗಾವಿ(ಮೇ.29): ಮಾರಾಟಕ್ಕೆ ರೆಡಿಯಾಗಿತ್ತಾ ಪೀರ್‌ಪಾಷಾ ಮಸೀದಿ? ಇಂತಹದ್ದೊಂದು ಸ್ಫೋಟಕ ಮಾಹಿತಿಯನ್ನ ಹೊರಹಾಕಿದ್ದಾರೆ ಬಸವಪ್ರಕಾಶ ಸ್ವಾಮೀಜಿ ಅವರು ಬಿಚ್ಚಿಟ್ಟಿದ್ದಾರೆ. ಇಂದು(ಭಾನುವಾರ) ನಗರದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಮಾತನಾಡಿದ ಸ್ವಾಮೀಜಿ, ನವಾಬ ಮನೆತನದವರು ಮಾರಾಟಕ್ಕೆ ಮುಂದಾಗಿದ್ದರು, ಆದರೆ ಮಾತೆ ಮಹಾದೇವಿ ಬಳಿ 3 ಕೋಟಿ ಭರಿಸಲು ಆಗಲಿಲ್ಲ ಅಂತ ಸ್ವಾಮೀಜಿ ಹೇಳಿದ್ದಾರೆ. ಮಸೀದಿ ಖರೀದಿಗೆ ನವಾಬ್ ವಂಶಸ್ಥರ ಜತೆ ಮಾತುಕತೆ ಆಗಿತ್ತು, ಮಾತೆ ಮಹಾದೇವಿ ಖರೀದಿಗೆ ಮುಂದಾಗಿದ್ರು ಅಂತ ತಿಳಿಸಿದ್ದಾರೆ.
'ಪೀರ್‌ಪಾಷಾ ಮಸೀದಿ- ಅನುಭವ ಮಂಟಪ ಲಿಂಗಾಯತರಿಗೆ ಸೇರಿದ್ದು, ವೀರಶೈವರು ತಲೆ ಹಾಕ್ಬಾರ್ದು!'