Asianet Suvarna News Asianet Suvarna News

ಒಳ್ಳೆಯ ಹುಡುಗ ಪ್ರಥಮ್ ತಂಡದಿಂದ ಮಂಗಳಮುಖಿಯರಿಗೆ ರೇಷನ್ ಕಿಟ್ ವಿತರಣೆ

 ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಒಳ್ಳೆಯ ಹುಡುಗ ಪ್ರಥಮ್ ಮತ್ತವರ ತಂಡದಿಂದ ಮಂಗಳಮುಖಿಯರಿಗೆ ರೇಷನ್ ಕಿಟ್ ವಿತರಿಸಿದ್ದಾರೆ. 

 

ಬೆಂಗಳೂರು (ಆ. 13): ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಒಳ್ಳೆಯ ಹುಡುಗ ಪ್ರಥಮ್, ಮಂಗಳಮುಖಿಯರಿಗೆ ರೇಷನ್ ಕಿಟ್ ವಿತರಿಸಿದ್ದಾರೆ. 'ಇಲ್ಲಿಯವರೆಗೂ ನಮ್ಮ‌ ತಂಡ ಮಾಡಿರೋ ಕೆಲಸದಲ್ಲಿ ಅತೀ ತೃಪ್ತಿಕರವಾದ ಕೆಲಸ ಇದು. ಮಂಗಳಮುಖಿಯರಿಗೆ ಈ ಬಾರಿ ಏನೂ ಮಾಡಿಲ್ಲ ಅನ್ನೋ ಬೇಸರವಿತ್ತು!ದೇವರ ದಯೆಯಿಂದ ಅದು ಆಯ್ತು' ಎಂದು ಪ್ರಥಮ್ ಬರೆದುಕೊಂಡಿದ್ದಾರೆ. 

ಬಿಗ್‌ಬಾಸ್ ಮಿನಿ ಸೀಸನ್; ಧಾರಾವಾಹಿ ಕಲಾವಿದರ ದಂಡು, ಸುದೀಪ್ ಹೋಸ್ಟ್!

'ವಿದೇಶದಲ್ಲಿರುವ ನನ್ನ ಸ್ನೇಹಿತೆಯರಿಬ್ಬರ ಸಹಕಾರದಿಂದ ಇಲ್ಲಿನ ಇನ್ನೊಬ್ಬ leader ಸಹಾಯದಿಂದ, ಬರದೇ ಇದ್ದವರಿಗೆ ಮನೆಗೆ ರೇಷನ್ ತಲುಪಿಸಲಾಯಿತು. ನಮ್ಮ ಮನೆಗೆ ಬಂದವರನ್ನ ಯಾರನ್ನೂ ಬರಿಗೈಲಿ ಕಳಿಸಿಲ್ಲ ನಾನು. ಜನಸಾಮಾನ್ಯರ ಬಳಿ ದುಡ್ಡು ಮುಟ್ಟದೇ ‌ನಮ್ಮ ಕೈಲಾಗಿದ್ದು ಮಾಡಿದ್ದೀವಿ' ಎಂದು ಪ್ರಥಮ್ ಹೇಳಿಕೊಂಡಿದ್ದಾರೆ.