Asianet Suvarna News Asianet Suvarna News

ಮೈತ್ರಿಯ ಅನಿವಾರ್ಯತೆ ಯಾರಿಗೆ ಹೆಚ್ಚು ಇತ್ತು? ನಿಮ್ಮ ಆಡಳಿತದಲ್ಲಿ ಭ್ರಷ್ಟಾಚಾರ ಆಗೇ ಇಲ್ವಾ?

ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇದರ ವಿಡಿಯೋ ಇಲ್ಲಿದೆ..

ಹಳೆ ಕರ್ನಾಟಕ ಭಾಗದಲ್ಲಿ ಜೆಡಿಎಸ್‌ನನ್ನು(JDS) ನೆಲಕಚ್ಚಿಸಬೇಕು ಎಂದು ಈ ಬಾರಿ ಕಾಂಗ್ರೆಸ್‌(Congress) ಚಿಂತಿಸಿತ್ತು. ಜೊತೆಗೆ ಬಿಜೆಪಿಯೂ(BJP) ಸಹ ಈ ಚಿಂತನೆಯಲ್ಲಿ ಇತ್ತು. ಮೈತ್ರಿಗೆ(Alliance) ಜೂನ್ ತಿಂಗಳಲ್ಲೇ ಮುಹೂರ್ತ ಫಿಕ್ಸ್‌ ಆಗಿತ್ತು. ಈ ವೇಳೆ ಪ್ರಾರಂಭಿಕ ಹಂತದ ಮೊದಲ ಸಭೆ ನಡೆಯಿತು ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ(HD Kumaraswamy) ಹೇಳಿದ್ದಾರೆ. ಮೈತ್ರಿ ವಿಷಯದಲ್ಲಿ ದೇವೇಗೌಡರಿಗೆ ಒತ್ತಾಯವನ್ನು ಮಾಡಿಲ್ಲ, ಆ ಪ್ರಶ್ನೆಯೇ ಇಲ್ಲ. ಅವರ ಸಂಪೂರ್ಣ ಸಹಮತದಿಂದ ಈ ತೀರ್ಮಾನ ಮಾಡಲಾಗಿದೆ. ಈ ಹಿಂದೆ ಸಿದ್ದರಾಮಯ್ಯ ಸಹ ಬಿಜೆಪಿಗೆ ಹೋಗಲು ಸಿದ್ಧರಾಗಿದ್ದರು. ಯಡಿಯೂರಪ್ಪ ಬಳಿ ಸಿದ್ದರಾಮಯ್ಯ ನನ್ನನ್ನು ಡಿಸಿಎಂ ಮಾಡಿ ಎಂದು ಹೋಗಿದ್ದರು. ವಿಪಕ್ಷ ನಾಯಕನಾಗುವ(Opposition Leader) ಪ್ರಶ್ನೆ ನನ್ನ ಮುಂದೆ ಇಲ್ಲ. ಬಿಜೆಪಿ ಶಾಸಕರೇ ಸಮರ್ಥವಾಗಿದ್ದಾರೆ. ಆದಷ್ಟೂ ಬೇಗ ವಿಪಕ್ಷನಾಯಕನನ್ನು ಆಯ್ಕೆ ಮಾಡಿ ಎಂದು ನಾನೇ ಹೈಕಮಾಂಡ್‌ಗೆ ಹೇಳಿದ್ದೇನೆಂದು ಹೆಚ್‌ಡಿಕೆ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಮಗಳನ್ನೇ ಕೊಲೆ ಮಾಡಲು ಅಪ್ಪ ನಿರ್ಧರಿಸಿದ್ದೇಕೆ..? ಮರ್ಯಾದಾ ಹತ್ಯೆಯಿಂದಿತ್ತು ಕರುಣಾಜನಕ ಕಥೆ..!

Video Top Stories