Asianet Suvarna News Asianet Suvarna News
breaking news image

ಶ್ರೀನಿವಾಸ ಪ್ರಸಾದ್ ರಾಜಕೀಯ ಕ್ಷೇತ್ರದ ಧೃವತಾರೆ: ಸುತ್ತೂರು ಶ್ರೀ

ಶ್ರೀನಿವಾಸ ಪ್ರಸಾದ್ ರಾಜಕೀಯ ಕ್ಷೇತ್ರದ ಧೃವತಾರೆ, ಸ್ವಂತ ಪ್ರತಿಭೆಯಿಂದ ಬೆಳೆದ ವ್ಯಕ್ತಿ ಶ್ರೀನಿವಾಸ ಪ್ರಸಾದ್ ದಲಿತರ ಧ್ವನಿಯಾಗಿದ್ದರು. ಹಾಗೆಯೇ ಶೋಷಣೆಗಳ ವಿರುದ್ಧ ಧ್ವನಿ ಎತ್ತುತ್ತಿದ್ದ ಅಪರೂಪದ ವ್ಯಕ್ತಿ ಎಂದು ಮೈಸೂರಲ್ಲಿ ದೇಶೀಕೇಂದ್ರ ಸ್ವಾಮೀಜಿ ಹೇಳಿದ್ದಾರೆ.

ವಿ ಶ್ರೀನಿವಾಸ ಪ್ರಸಾದ್ (Srinivasa Prasad death) ಅಗಲಿಕೆಗೆ ಸುತ್ತೂರು ಶ್ರೀ(Suttur shree) ಸಂತಾಪ ಸೂಚಿಸಿದ್ದಾರೆ. ಶ್ರೀನಿವಾಸ ಪ್ರಸಾದ್ ರಾಜಕೀಯ ಕ್ಷೇತ್ರದ ಧೃವತಾರೆ, ಸ್ವಂತ ಪ್ರತಿಭೆಯಿಂದ ಬೆಳೆದ ವ್ಯಕ್ತಿ ಶ್ರೀನಿವಾಸ ಪ್ರಸಾದ್ ದಲಿತರ ಧ್ವನಿಯಾಗಿದ್ದರು. ಹಾಗೆಯೇ ಶೋಷಣೆಗಳ ವಿರುದ್ಧ ಧ್ವನಿ ಎತ್ತುತ್ತಿದ್ದ ಅಪರೂಪದ ವ್ಯಕ್ತಿ ಇವರು, ತಮ್ಮ ಸಿದ್ಧಾಂತಗಳಿಗೆ ಸದಾ ಬದ್ಧರಾಗಿ ಕೆಲಸ ಮಾಡಿದರು ಎಂದು ಮೈಸೂರಲ್ಲಿ ದೇಶೀಕೇಂದ್ರ ಸ್ವಾಮೀಜಿ (sutturu shree Deshikendra Swamiji) ಹೇಳಿಕೆ ನೀಡಿದ್ದಾರೆ. ಹಾಗೆಯೇ ಸುತ್ತೂರು ಸ್ವಾಮೀಜಿ ಅವರು ಅಂತಿಮ ದರ್ಶನ ಪಡೆದು ನಂತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಪಾರ್ಥೀವ ಶರೀರದ ಸಾರ್ವಜನಿಕ ದರ್ಶನದ ಶ್ರೀಗಳು ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಸುತ್ತೂರು ಶ್ರೀಗಳಿಗೆ ಪುತ್ರಿ ಪ್ರತಿಮಾ ಪ್ರಸಾದ್‌ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  ಶೋಷಿತ ವರ್ಗದ ದನಿಯಾಗಿದ್ದರು, ಯಾವುದೇ ಕಪ್ಪು ಚುಕ್ಕೆ ಇಲ್ಲದೆ ರಾಜಕೀಯ: ಜಿ ಟಿ ದೇವೇಗೌಡ

Video Top Stories