ಕಾರವಾರ: ಬಾವಿ, ರಸ್ತೆಗಳು, ಮನೆಗಳೊಳಗೆ ವಿಚಿತ್ರ ಹುಳುಗಳ ಎಂಟ್ರಿ, ಜನ ಕಂಗಾಲು
- ಕರವಾರ ಗ್ರಾಮಗಳಿಗೆ ಏಕಾಏಕಿ ವಿಚಿತ್ರ ಹುಳುಗಳ ಎಂಟ್ರಿ, ಜನ ಕಂಗಾಲು!
- ತೆರೆದ ಬಾವಿ, ರಸ್ತೆಗಳು, ಮನೆಗಳೊಳಗೆ ರಾಶಿ ರಾಶಿ ಹುಳಗಳ ಕಾಟ
- ವಿಚಿತ್ರ ಹುಳುಗಳ ಕಾಟದಿಂದ ಆತಂಕದಲ್ಲಿರುವ ಗ್ರಾಮಸ್ಥರು
ಉತ್ತರ ಕನ್ನಡ (ಮೇ. 30): ಕಾರವಾರ ತಾಲೂಕಿನ ಆಮದಳ್ಳಿ, ಹೊಸಗದ್ದೆ, ಮಾದೆವಾಡ, ಐಯನ್ ಭಾಗ್ ಮುಂತಾದ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ವಿಚಿತ್ರ ಹುಳುಗಳು ಜನರಲ್ಲಿ ಯಕ್ಷ ಪ್ರಶ್ನೆ ಮೂಡಿಸಿದೆ. ಜನರು ಹೇಳೋ ಪ್ರಕಾರ, ಇಂತಹ ಹುಳುಗಳನ್ನು ನಾವು ಜೀವಮಾನದಲ್ಲಿ ಈ ಮೊದಲು ನೋಡಿದ್ದೆ ಇಲ್ಲ. ಅದ್ರಲ್ಲೂ, ಇಷ್ಟು ಪ್ರಮಾಣದ ರಾಶಿ ರಾಶಿ ಹುಳಗಳನ್ನು ನಾವು ಎಂದೂ ಕಂಡಿಲ್ಲ. ಇವುಗಳನ್ನು ನೋಡಿದರೆ ಭಯವಾಗುತ್ತೆ. ಕುಡಿಯುವುದಕ್ಕೂ ನಮಗೆ ನೀರಿಲ್ಲ. ಎಲ್ಲಾ ಬಾವಿಗಳಲ್ಲಿ ಹುಳುಗಳು ಬಿದ್ದಿವೆ. ಬಾವಿಯಿಂದ ನೀರು ತೆಗೆದರೆ ಬಿಂದಿಗೆ ತುಂಬಾ ಹುಳಗಳು ಇರುತ್ತೆ. ಹೀಗಾದ್ರೆ ನಾವು ಜೀವನ ಮಾಡೋದಾದ್ರೂ ಹೇಗೆ..? ಈ ಹುಳಗಳಿಂದ ಎಲ್ಲಿ ನಮಗೆ ರೋಗ ರುಜಿನಗಳು ಅಂಟಿಕೊಳ್ಳುತ್ತವೋ ಅಂತಾ ಭೀತಿ ಶುರುವಾಗಿದೆ. ರಾಶಿ ರಾಶಿ ಹುಳುಗಳು ಎಲ್ಲಿಂದ ಬರುತ್ತಿವೆ ಅಂತಾ ಗೊತ್ತಿಲ್ಲ. ನಮಗಂತೂ ಸಿಕ್ಕಾಪಟ್ಟೆ ಹೆದರಿಕೆ ಶುರುವಾಗಿದೆ ಅಂತಾರೆ ಗ್ರಾಮಸ್ಥರು.
ಕಾರವಾರ: ಸಿಆರ್‌ಝಡ್ ನಿಯಮ ಉಲ್ಲಂಘಿಸಿ ಪಾರ್ಕ್ ನಿರ್ಮಾಣ, ಮೀನುಗಾರರಿಗೆ ಸಂಕಷ್ಟ
ಇನ್ನು ಮನೆಗಳ ಕಂಪೌಂಡ್, ತೆರೆದ ಬಾವಿಗಳಲ್ಲೂ ಈ ಹುಳುಗಳು ವ್ಯಾಪಿಸಿದ್ದು, ಕುಡಿಯೋ ನೀರಿಗೂ ಗ್ರಾಮದಲ್ಲಿ ತಾತ್ವಾರ ಉಂಟಾಗಿದೆ. ಕಳೆದ ನಾಲ್ಕು ದಿನಗಳಿಂದ ಈ ಹುಳುಗಳಿಂದಾಗಿ ಗ್ರಾಮಸ್ಥರಂತೂ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಯಾವುದೇ ಕೃಷಿ ಚಟುವಟಿಕೆಗಳು ನಡೆಯದ ಪ್ರದೇಶಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಈ ಹುಳುಗಳು ತುಂಬಿರಲು ಕಾರಣ ಏನು ಎಂಬುದೇ ಗ್ರಾಮಸ್ಥರಿಗೆ ಯಕ್ಷ ಪ್ರಶ್ನೆಯಾಗಿದೆ. ಹೆಜ್ಜೆ ಇಟ್ಟಲೆಲ್ಲಾ ಹುಳುಗಳ ರಾಶಿಯೇ ಸಿಗುತ್ತಿರುವುದರಿಂದ ಜನರು ಊಟೋಪಚಾರಕ್ಕೂ ಅಸಹ್ಯ ಪಡುವಂತಹ ಸ್ಥಿತಿ ಉಂಟಾಗಿದೆ.
ಸಣ್ಣ ಮಕ್ಕಳು ಹೊರಗೆ ಓಡಾಡುವುದಕ್ಕೆ ಭಯಪಡುತ್ತಿದ್ದು, ಕೆಲವು ಮಕ್ಕಳಂತೂ ಶಾಲೆಗೆ ಹೋಗುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಈ ವಿಚಿತ್ರ ಹುಳುಗಳು ಜನರಿಗೆ ಭಾರೀ ಸಮಸ್ಯೆಯನ್ನು ಉಂಟು ಮಾಡಿರೋದ್ರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಈ ಸಂಕಷ್ಟ ಪರಿಹರಿಸಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.
ಉತ್ತರ ಕನ್ನಡ ಡೀಸಿ ಮುಲೈ ಮುಹಿಲನ್ ಹಾಡಿಗೆ ಸಿಬ್ಬಂದಿ ಫಿದಾ.!
ಒಟ್ಟಿನಲ್ಲಿ ಇಷ್ಟು ದಿನ ಹೊನ್ನಾವರ ಭಾಗದಲ್ಲಿ ಹೊಲಗಳಿಗೆ ಲಗ್ಗೆ ಇಟ್ಟು ರೈತರನ್ನ ಕಾಡುತ್ತಿದ್ದ ಹುಳುಗಳು ಇದೀಗ ಕಾರವಾರ ಭಾಗದಲ್ಲಿ ಊರಿಗೇ ಕಾಲಿಟ್ಟಿವೆ.. ಹೀಗಾಗಿ ಜನ ಆತಂಕಗೊಂಡಿರುವ ಜನರು ಇದರಿಂದ ತಮಗೆ ಕಾಯಿಲೆ ಬರುತ್ತೊ ಅಂತಾ ಭೀತಿಗೊಳಗಾಗಿದ್ದಾರೆ. ಈ ಕಾರಣದಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.