ಅಂಕೋಲಾ: ಸೇತುವೆ ಇಲ್ಲದೇ ಗ್ರಾಮಸ್ಥರ ಪರದಾಟ, ಜನಪ್ರತಿನಿಧಿಗಳು ಈ ಕಡೆ ಬರ್ತಿಲ್ಲ!
ತೂಗುಸೇವೆ ಕೊಚ್ಚಿ ಹೋಗಿ 2 ವರ್ಷವಾದರೂ ನಿರ್ಮಾಣವಾಗಿಲ್ಲ. ಗ್ರಾಮಸ್ಥರು ದೋಣಿಯಲ್ಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿರುವುದು ಅಂಕೋಲಾ ತಾಲೂಕಿನ ರಾಮನಗುಳಿ ಗ್ರಾಮದಲ್ಲಿ.
ಉತ್ತರ ಕನ್ನಡ (ಜು. 13): ತೂಗುಸೇವೆ ಕೊಚ್ಚಿ ಹೋಗಿ 2 ವರ್ಷವಾದರೂ ನಿರ್ಮಾಣವಾಗಿಲ್ಲ. ಗ್ರಾಮಸ್ಥರು ದೋಣಿಯಲ್ಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿರುವುದು ಅಂಕೋಲಾ ತಾಲೂಕಿನ ರಾಮನಗುಳಿ ಗ್ರಾಮದಲ್ಲಿ. ಇಲ್ಲಿನ ಗಂಗಾವಳಿ ನದಿಗೆ ಹೊಂದಿಕೊಂಡು ಹತ್ತಾರು ಗ್ರಾಮಗಳಿವೆ.
ಮೂರ್ನಾಲ್ಕು ತಿಂಗಳಿಂದ ಮೀನುಗಾರರಿಗಿಲ್ಲ ಸಬ್ಸಿಡಿ, ಇನ್ಮುಂದೆ ಕರರಹಿತ ಡಿಸೇಲ್
ಜನರ ಓಡಾಟಕ್ಕೆ ಅನುಕೂಲವಾಗಲಿ ಎಂದು ರಾಮನಗುಳಿ ಗ್ರಾಮದಿಂದ ಕಲ್ಲೇಶ್ವರ ಗ್ರಾಮಕ್ಕೆ 2011 ರಲ್ಲಿ ತೂಗು ಸೇತುವೆ ನಿರ್ಮಾಣ ಮಾಡಲಾಗಿತ್ತು. 2019 ರ ಧಾರಾಕಾರ ಮಳೆಗೆ ಸೇತುವೆ ಕೊಚ್ಚಿ ಹೋಗಿದೆ. ಸೇತುವೆ ಇಲ್ಲದೇ ಗ್ರಾಮಸ್ಥರು ದೋಣಿಯಲ್ಲೇ ಓಡಾಡುತ್ತಿದ್ದಾರೆ. ನಮಗೊಂದು ಸೇತುವೆ ಮಾಡಿಸಿಕೊಡಿ ಎಂದು ಮನವಿ ಮಾಡಿದ್ದಾರೆ.