ಹಿಂದೂ ಸಂಪ್ರದಾಯದಂತೆ ಜರ್ಮನಿ ಯುವತಿ ಕೈ ಹಿಡಿದ ಕುಂದಾಪುರ ಯುವಕ !

ಜರ್ಮನಿ ಯುವತಿಯನ್ನು ಉಡುಪಿ ಯುವಕ ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಮದುವೆಯಾದ ಘಟನೆ ಜಿಲ್ಲೆಯ ಕುಂದಾಪುರದಲ್ಲಿ ಸೋಮವಾರ ನಡೆದಿದೆ.
 

First Published Jan 6, 2024, 1:07 PM IST | Last Updated Jan 6, 2024, 1:07 PM IST

ಉಡುಪಿ: ಕುಂದಾಪುರದ ಯುವಕ ಜರ್ಮನಿಯ ಯುವತಿಯನ್ನು(German woman) ಹಿಂದೂ ಸಂಪ್ರದಾಯದಂತೆ(Hindu tradition) ಮದುವೆಯಾಗಿದ್ದಾನೆ. ಕುಂದಾಪುರ( Kundapur) ತಾಲೂಕಿನ ಗ್ರಾಮೀಣ ಭಾಗವಾದ ಆಜ್ರಿಯ ಕರಿಮನೆ ಸುವರ್ಣ ಮತ್ತು ಪಂಜು ಪೂಜಾರಿ ದಂಪತಿಯ ಪುತ್ರ ಚಂದನ್ ಈ ರೀತಿ ವಿವಾಹವಾಗಿದ್ದಾರೆ. ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾದರು. ಈ ಮದುವೆಗೆ ಎರಡೂ ಕುಟುಂಬಗಳ ಹಿರಿಯರು ಸಾಕ್ಷಿಯಾದರು. ಚಂದನ್ ಅವರು ಜರ್ಮನಿಯಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಶಿಕ್ಷಕಿಯಾಗಿರುವ ಕಾರಿನ್ ಅವರನ್ನು ಪ್ರೀತಿಸುತ್ತಿದ್ದರು. ಸದ್ಯ ಈ ವಿವಾಹಕ್ಕೆ ಆ ಊರಿನ ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ.

ಇದನ್ನೂ ವೀಕ್ಷಿಸಿ:  ಏನೇ ಎದುರಾದರೂ ಕುಗ್ಗಬೇಡ, ಮುನ್ನುಗ್ಗು ನಿನ್ನ ಬೆನ್ನ ಹಿಂದೆ ನಾನಿದ್ದೇನೆ: ರಿಷಬ್‌ ಶೆಟ್ಟಿಗೆ ಅಭಯ ನೀಡಿದ ದೈವ!