ಏನೇ ಎದುರಾದರೂ ಕುಗ್ಗಬೇಡ, ಮುನ್ನುಗ್ಗು ನಿನ್ನ ಬೆನ್ನ ಹಿಂದೆ ನಾನಿದ್ದೇನೆ: ರಿಷಬ್ ಶೆಟ್ಟಿಗೆ ಅಭಯ ನೀಡಿದ ದೈವ!
ʻಭಯ ಪಡಬೇಡ ನಾನಿದ್ದೇನೆʼ ಎಂದು ರಿಷಬ್ ಶೆಟ್ಟಿಗೆ ದೈವ ಅಭಯ ನೀಡಿದೆ. ರಿಷಬ್ ಶೆಟ್ಟಿಯನ್ನು ಮೈಸಂದಾಯ ದೈವ ಆಲಂಗಿಸಿ, ಕಾಂತಾರ ರೀತಿಯಲ್ಲೇ ರಿಷಬ್‌ಗೆ ಆಶೀರ್ವಾದ ನೀಡಿದೆ. ದೈವದ ಅಭಯ ಪಡೆಯಲೆಂದೇ ರಿಷಬ್ ಮಂಗಳೂರು ಗುರುಪುರ ವಜ್ರದೇಹಿ ಮಠದ ದೈವ ಕೋಲಕ್ಕೆ ಆಗಮಿಸಿದ್ದರು.
ಮಂಗಳೂರು (ಜ.06): ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದ 'ಕಾಂತಾರ' ಅಧ್ಯಾಯ 1 ಚಿತ್ರದ ಮೂಹೂರ್ತ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಈಗಾಗಲೇ ನೆರವೇರಿದೆ. ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿವೆ. ಇದೀಗ ರಿಷಬ್ ಅವರು ದೈವ ದರ್ಶನವನ್ನು ಪಡೆದಿದ್ದಾರೆ. ʻಭಯ ಪಡಬೇಡ ನಾನಿದ್ದೇನೆʼ ಎಂದು ರಿಷಬ್ ಶೆಟ್ಟಿಗೆ ದೈವ ಅಭಯ ನೀಡಿದೆ. ರಿಷಬ್ ಶೆಟ್ಟಿಯನ್ನು ಮೈಸಂದಾಯ ದೈವ ಆಲಂಗಿಸಿ, ಕಾಂತಾರ ರೀತಿಯಲ್ಲೇ ರಿಷಬ್‌ಗೆ ಆಶೀರ್ವಾದ ನೀಡಿದೆ. ದೈವದ ಅಭಯ ಪಡೆಯಲೆಂದೇ ರಿಷಬ್ ಮಂಗಳೂರು ಗುರುಪುರ ವಜ್ರದೇಹಿ ಮಠದ ದೈವ ಕೋಲಕ್ಕೆ ಆಗಮಿಸಿದ್ದರು. ವಜ್ರದೇಹಿ ಮಠದ ಮೈಸಂದಾಯ ಕೋಲದಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸಿ ದೈವದ ಅಭಯ ಪಡೆದಿದ್ದಾರೆ. ಏನೇ ಎದುರಾದರೂ ಕುಗ್ಗಬೇಡ ಎಂದು ರಿಷಬ್ ಅವರಿಗೆ ಸೂಚನೆ ಕೊಟ್ಟಿದೆ. ಮುನ್ನುಗ್ಗು ನಿನ್ನ ಬೆನ್ನ ಹಿಂದೆ ನಾನಿದ್ದೇನೆ ಎಂದು ಸನ್ನೆ ಮಾಡಿ ಆಶೀರ್ವದಿಸಿದೆ. ದೈವಾರಾಧನೆಯ ಕಟ್ಟುಪಾಡು ಅಧ್ಯಾಯನ ಮಾಡಿಕೊಂಡು, ದೈವದ ನೆಲೆಯನ್ನ ಅರಿತುಕೊಂಡು ಸಮಾಜಕ್ಕೆ ತೋರಿಸಬೇಕು ಎಂಬ ಇಚ್ಛೆಯಿಂದು ರಿಷಬ್ ಕೋಲಕ್ಕೆ ಆಗಮಿಸಿದ್ದಾರೆ.