Asianet Suvarna News Asianet Suvarna News

ಶೌಚಾಲಯ ನಿರ್ಮಾಣವೇ ಆಗಿಲ್ಲ, ಹಣ ಮಾತ್ರ ಗುಳುಂ, ಕವಿತಾಳ ಪಪಂನಲ್ಲಿ ಅಕ್ರಮ

Feb 11, 2021, 5:31 PM IST

ರಾಯಚೂರು (ಫೆ. 11): ಇಲ್ಲಿನ ಕವಿತಾಳ ಪಟ್ಟಣ ಪಂಚಾಯತ್‌ನಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಹಣದಲ್ಲಿ ಅಕ್ರಮ ನಡೆದಿದೆ. 48 ಶೌಚಾಲಯವನ್ನೇ ಕಟ್ಟಿಲ್ಲ ಆದ್ರೆ ಹಣ ಮಾತ್ರ ಗುಳುಂ ಆಗಿದೆ. ಒಂದೇ ಶೌಚಾಲಯಕ್ಕೆ ಎರಡ್ಮೂರು ಬಾರಿ ಬಿಲ್ ಮಾಡಲಾಗಿದೆ. 

'ಹಿಂದ' ದಿಂದ ಹಿಂದೆ ಸರಿದ ಸಿದ್ದರಾಮಯ್ಯ; ನಿನ್ನೆ ರಾತ್ರಿ ಬಂದ ಒಂದು ಕಾಲ್ ಕಾರಣ?

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯಕ್ಕೆ 15 ಸಾವಿರ ರೂ ಹಣವನ್ನು 3 ಕಂತುಗಳಲ್ಲಿ ನೀಡಲಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಕವಿತಾಳ ಪಟ್ಟಣ ಪಂಚಾಯತ್ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ ಹಣ ಗುಳುಂ ಮಾಡಿದ್ದಾರೆ.