Savarkar Portrait: ಸಾವರ್ಕರ್ ಪೇಂಟಿಂಗ್ ಮಾಡಿದ್ದಕ್ಕೆ ಖುಷಿಯಿದೆ: ಚಿತ್ರ ಕಲಾವಿದ ಡಾ. ಸುಭಾಷ್ ಕಮ್ಮಾರ್

ಸುವರ್ಣ ಸೌಧದಲ್ಲಿ ಹಾಕಲಾದ ವೀರ ಸಾವರ್ಕರ್ ಫೋಟೋವನ್ನು ಪೇಂಟಿಂಗ್ ಮಾಡಿದ ಹಿರಿಯ ಚಿತ್ರ ಕಲಾವಿದ ಡಾ. ಸುಭಾಷ್ ಕಮ್ಮಾರ್ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ.

First Published Dec 21, 2022, 10:44 AM IST | Last Updated Dec 21, 2022, 11:27 AM IST

ವೀರ ಸಾವರ್ಕರ್ ಪೇಂಟಿಂಗ್ ಮಾಡಿರೋದು ನನಗೆ ಹೆಮ್ಮೆ ಅನ್ಸಿದೆ. ವಿರೋಧ ಪಕ್ಷದವರು ಆರೋಪ ಮಾಡೋದು ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಡಾ. ಸುಭಾಷ್ ಕಮ್ಮಾರ್ ತಿಳಿಸಿದ್ದಾರೆ. ಲಲಿತಾ ಕಲಾ ಅಕಾಡೆಮಿಯಿಂದ ಸಾವರ್ಕರ್ ಪೇಂಟಿಂಗ್ ಆರ್ಡರ್ ಬಂದಿತ್ತು. ಸುವರ್ಣ ಸೌಧದಲ್ಲಿ ನನ್ನ ಪೇಂಟಿಂಗ್ ಇರುತ್ತೆ ಅಂತಾ ಖುಷಿಯಾಗಿತ್ತು, ಹೀಗಾಗಿ ಖುಷಿಯಿಂದ ಒಪ್ಪಿ ಮಾಡಿದ್ದೇನೆ ಎಂದರು. ಈ ಪೇಂಟಿಂಗ್ ಮಾಡಲು  ಸತತ ಮೂರೂವರೆ ತಿಂಗಳು ಹಗಲು ರಾತ್ರಿ ಶ್ರಮ ವಹಿಸಿ ವಿಶೇಷವಾಗಿ ಮಾಡಿದ್ದೇನೆ. ದೇಶಕ್ಕಾಗಿ ಹೋರಾಡಿದ ವೀರ ಸಾವರ್ಕರ್ ಪೇಂಟಿಂಗ್ ಮಾಡುವಾಗ ಒಂದು ಮಗುವನ್ನು ಮುದ್ದಿಸುವಂತೆ ಖುಷಿ ಪಟ್ಟಿದ್ದೇನೆ. ನನ್ನಂತೆ ಇನ್ನಿತರ ಕಲಾವಿದರು ಹಲವರ ಚಿತ್ರ ಪೇಂಟಿಂಗ್ ಮಾಡಿದ್ದಾರೆ. ಇದು ವಿವಾದ ಅನ್ನೋದು ಮೂರ್ಖತನ ಅಷ್ಟೆ. ನನಗ್ಯಾವ ಪಶ್ಚಾತ್ತಾಪವಿಲ್ಲ ಸಾವರ್ಕರ್ ಪೇಂಟಿಂಗ್'ಗೆ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಿದೆ ಎಂದು ಹೇಳಿದರು. ಸಿದ್ದರಾಮಯ್ಯ, ಡಿಕೆಶಿ ಫೋಟೋ ಪೇಂಟಿಂಗ್ ಮಾಡಿ ಅಂದ್ರು ನಾನು ಮಾಡ್ತಿನಿ, ಯಾವುದೇ ರಾಜಕೀಯ ಪಕ್ಷದವನು ನಾನಲ್ಲ ಎಂದು ಚಿತ್ರ ಕಲಾವಿದ ಡಾ. ಸುಭಾಷ್ ಕಮ್ಮಾರ್ ಹೇಳಿದ್ದಾರೆ.

ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಮತ್ತೆ ಕರ್ನಾಟಕ ವಿರುದ್ಧ ಕಿಡಿ