ಪಿಇಎಸ್ ಕಾಲೇಜಿನಲ್ಲಿ ನಾಲ್ಕು ದಿನಗಳ ಕಾಲ ಬೇರೆ ಬೇರೆ ಥೀಮ್‌ಗಳ ಅಡಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಅತೀ ಉತ್ಸುಕತೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಡಾ. ಎಸ್. ಜಯಶಂಕರ್(S.Jaishankar ) ಆಗಮಿಸಿದ್ರು. ಸಂಸದ ತೇಜಸ್ವಿ ಸೂರ್ಯ, PESನ ಚಾನ್ಸಲರ್ ಡಾ.ಎಂ.ಆರ್.ದೊರೆಸ್ವಾಮಿ, ಪ್ರೋ. ಚಾನ್ಸಲರ್ ಜವಾಹಾರ ದೊರೆಸ್ವಾಮಿ, ಸಂಜೀವ್ ಸ್ಯಾಮುಯಲ್, ತುಘಲಕ್ ಪತ್ರಿಕೆಯ ಸಂಪಾದಕ ಸ್ವಾಮೀನಾತನ್ ಉಪಸ್ಥಿತರಿದ್ದರು. ಈ ವೇಳೆ ಡಾ. ಜೈಶಂಕರ್ ಅವರ ವಿದೇಶಾಂಗ ನೀತಿ ಕುರಿತಾದ WHY BHARAT MATTERS ಎಂಬ ಹೊಸ ಪುಸ್ತಕ ಬಿಡುಗಡೆ ಮಾಡಿದ್ರು. ಪ್ರಸ್ತುತ ಭಾರತವು ಆತ್ಮ ವಿಶ್ವಾಸ ಹೊಂದಿದೆ, ತನ್ನ ಇತಿಹಾಸವನ್ನು ಅರಿತುಕೊಂಡು ಮುನ್ನಡೆಯುತ್ತಿದೆ. ಇದು 2014ರಲ್ಲಿ ಪ್ರಾರಂಭವಾಯಿತು ಮತ್ತು ಈ ಅಮೃತಕಾಲದ ಸಮಯದಲ್ಲಿ ಭಾರತವನ್ನು ವಿಶ್ವ ಗುರುವಾಗುವಂತೆ ಮಾಡಿದೆ. ಈ ದೇಶಗಳ ನಡುವೆ ಸಾಂಪ್ರದಾಯಿಕ-ಸಾಂಸ್ಕೃತಿಕ ಸಂಬಂಧವಿರುವುದರಿಂದ, ಇತರ ದೇಶಗಳಿಗೂ ರಾಮಮಂದಿರ ಉದ್ಘಾಟನೆಯ ಸಂಭ್ರಮ ಉತ್ತೇಜನಕಾರಿಯಾಗಿದೆ ಎಂದು ವಿದೇಶಾಂಗ ಸಚಿವ ಜೈ ಶಂಕರ್ ಅಭಿಪ್ರಾಯ ಪಟ್ಟರು. ಪಿಇಎಸ್ ಸಂಸ್ಥೆಯ ಐವರು ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯ್ತು.ಈ ವಿದ್ಯಾರ್ಥಿಗಳು ಸಮಾಜಕ್ಕೆ ನೀಡಿದ ಗಮನಾರ್ಹ ಕೊಡುಗೆಗಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ.ಅಜೋಯ್ ಕುಮಾರ್ ಸನ್ಮಾನಿಸಿದರು. ನಂತರ ಕೈಲಾಶ್ ಖೇರ್ ತಂಡ ನೀಡಿದ ಸಂಗೀತದೊಂದಿಗೆ ಕಾರ್ಯಕ್ರಮ ಮುಕ್ತಾಯ ಮಾಡಿದ್ರು.

ಇದನ್ನೂ ವೀಕ್ಷಿಸಿ: Amala Paul: ಮದುವೆಯಾದ ಎರಡೇ ತಿಂಗಳಿಗೆ ಅಮ್ಮನಾದ ನಟಿ..! ಬೇಬಿ ಬಂಪ್ ಫೋಟೋಸ್‌ ವೈರಲ್‌