Asianet Suvarna News Asianet Suvarna News

ಗರ್ಭಿಣಿಗೆ ರಕ್ತಸ್ರಾವ, ಮಗು ಸಾವು, ಕಠಿಣ ಕ್ರಮಕ್ಕೆ ಸೂಚನೆ

Jun 9, 2020, 2:51 PM IST

ರಾಯಚೂರು(ಜೂ. 09)  ಕೊರೋನಾ ಸೋಂಕಿಗೆ ತುತ್ತಾಗಿ ರಾಯಚೂರಿನ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಗೆ ಗರ್ಭಪಾತವಾದ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾದ ನಂತರ ಕ್ರಮ  ತೆಗೆದುಕೊಳ್ಳಲಾಗಿದೆ.

ಮಧ್ಯರಾತ್ರಿಯಿಂದ ರಕ್ತಸ್ರಾವ ಆಗುತ್ತಿದ್ದರೂ ಕೇಳುವವರಿಲ್ಲ

ಭಾನುವಾರ ರಾತ್ರಿಯಿಂದಲೇ ರಕ್ತಸ್ರಾವವಾಗುತ್ತಿದ್ದರೂ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು, ಬೇರೆ ಆಸ್ಪತ್ರೆಗೆ ಸ್ಥಳಾಂತರ ಮಾಡಿ ಎಂದು ಕೇಳಿಕೊಂಡಿದ್ದರೂ . ಗರ್ಭಿಣಿಗೆ ಚಿಕಿತ್ಸೆ ನೀಡುವಂತೆ‌ ಕೊವಿಡ್ ವಾರ್ಡ್ ನ ರೋಗಿಗಳು ಮಧ್ಯಾಹ್ನದ ಊಟ ಬಿಟ್ಟು ಪ್ರತಿಭಟನೆ ನಡೆಸಿದ್ದರು.  ಘಟನೆ ಬಗ್ಗೆ ತನಿಖೆ ಮಾಡಿ ವರದಿ ನೀಡಲು ಸೂಚನೆ ನೀಡಲಾಗಿದೆ ಎಂದು ಶಾಸಕ ಡಾ. ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.