Asianet Suvarna News Asianet Suvarna News

ಅಮಾನವೀಯತೆ; ಗರ್ಭಿಣಿಗೆ ರಕ್ತಸ್ರಾವವಾಗ್ತಾಯಿದ್ರೂ ಕೇಳೋರಿಲ್ಲ..!

ಮಹರಾಷ್ಟ್ರದಿಂದ ಬಂದ ಕೊರೋನಾ ಸೋಂಕಿತರು ರಾಯಚೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಪೈಕಿ ಒಬ್ಬರು ಮೂರು ತಿಂಗಳು ಗರ್ಭಿಣಿಯಾಗಿದ್ದರು. ಆ ಮಹಿಳೆಗೆ ಆಗಾಗ ರಕ್ತಸ್ರಾವ ಆಗುತ್ತಿರುತ್ತದೆ. ಬೇರೆ ಆಸ್ಪತ್ರೆಯಲ್ಲಿ ನಾವು ಚಿಕಿತ್ಸೆ ಪಡೆಯಲು ಅವಕಾಶ ಕೊಡಿ ಎಂದು ಮನವಿ ಮಾಡಿರುತ್ತಾರೆ. ಆದರೆ ಇವರ ಮಾತನ್ನು ಅಲ್ಲಿನ ಸಿಬ್ಬಂದಿ ಕೇರ್ ಮಾಡಿಲ್ಲ.

ರಾಯಚೂರು(ಜೂ.09): ಹೆಸರಿಗೆ ಕೋವಿಡ್ ಆಸ್ಪತ್ರೆ, ಆದ್ರೆ ಇಲ್ಲಿನ ಒಂದು ಆಸ್ಪತ್ರೆಯಲ್ಲಿ ಹೇಳೋರು ಇಲ್ಲ, ಕೇಳೋರು ಇಲ್ಲ ಎನ್ನುವಂತಾಗಿದೆ. ಗರ್ಭಿಣಿ ಮಹಿಳೆಗೆ ರಕ್ತಸ್ರಾವ ಆಗುತ್ತಿದ್ದರೂ ವೈದ್ಯರಾಗಲಿ, ಸಿಬ್ಬಂದಿಗಳಾಗಲಿ ತಿರುಗಿಯೂ ನೋಡಿಲ್ಲ.

ಮಹರಾಷ್ಟ್ರದಿಂದ ಬಂದ ಕೊರೋನಾ ಸೋಂಕಿತರು ರಾಯಚೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಪೈಕಿ ಒಬ್ಬರು ಮೂರು ತಿಂಗಳು ಗರ್ಭಿಣಿಯಾಗಿದ್ದರು. ಆ ಮಹಿಳೆಗೆ ಆಗಾಗ ರಕ್ತಸ್ರಾವ ಆಗುತ್ತಿರುತ್ತದೆ. ಬೇರೆ ಆಸ್ಪತ್ರೆಯಲ್ಲಿ ನಾವು ಚಿಕಿತ್ಸೆ ಪಡೆಯಲು ಅವಕಾಶ ಕೊಡಿ ಎಂದು ಮನವಿ ಮಾಡಿರುತ್ತಾರೆ. ಆದರೆ ಇವರ ಮಾತನ್ನು ಅಲ್ಲಿನ ಸಿಬ್ಬಂದಿ ಕೇರ್ ಮಾಡಿಲ್ಲ.

ಖರ್ಗೆ ಬಳಿ ಕಾರಿಲ್ಲ, ಕೃಷಿ ಭೂಮಿಯೂ ಇಲ್ಲ: ಇಲ್ಲಿದೆ ನೋಡಿ ಆಸ್ತಿ, ಸಾಲದ ವಿವರ!

ಆಗ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 190 ಸೋಂಕಿತರು ಮಧ್ಯಾಹ್ನದ ಊಟವನ್ನು ತೊರೆದು ಪ್ರತಿಭಟನೆ ನಡೆಸಿದ್ದಾರೆ. ಕೊನೆಗೂ ಪ್ರತಿಭಟನೆಗೆ ಮಣಿದ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ರಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.