ನಮ್ಮ ಜನರಿಗೆ ಬುದ್ಧಿ ಯಾವಾಗ್‌ ಬರುತ್ತೆ ಸ್ವಾಮಿ: ಲಾಕ್‌ಡೌನ್‌ಗೆ ಕ್ಯಾರೆ ಎನ್ನದ ಬೆಳಗಾವಿ ಜನ..!

ತರಕಾರಿ ಖರೀದಿಗೆ ಮುಗಿಬಿದ್ದ ಜನರು| ಬೆಳಗಾವಿ ಜಿಲ್ಲೆಯ ಗೋಕಾಕ್‌ ನಗರದಲ್ಲಿ ನಡೆದ ಘಟನೆ| ಜಿಲ್ಲೆಯಲ್ಲಿ ಮುಂದುವರೆದ ಕೊರೋನಾ ರಣಕೇಕೆ| ಜಿಲ್ಲೆಯಲ್ಲಿ ದಿನೇ ದಿನೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ|

First Published May 2, 2020, 12:24 PM IST | Last Updated May 2, 2020, 12:24 PM IST

ಬೆಳಗಾವಿ(ಮೇ.02):  ಕೊರೋನಾ ಪ್ರಕರಣಗಳ ಸಂಖ್ಯೆ 72 ಆದರೂ ಜಿಲ್ಲೆಯ ಜನರು ಮಾತ್ರ ಬುದ್ದಿ ಕಲಿಯೋ ಲಕ್ಷಣಗಳು ಕಾಣಿಸುತ್ತಿಲ್ಲ. ಹೌದು, ಜಿಲ್ಲೆಯ ಗೋಕಾಕ್‌ ನಗರದಲ್ಲಿ ತರಕಾರಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಮಾರ್ಕೆಟ್‌ ಬಂದು ಜನರು ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಹಾಗೂ ಮಾಸ್ಕ್‌ ಕೂಡ ಧರಿಸಿಲ್ಲ. 

ಮದ್ಯ ಪ್ರಿಯರಿಗೆ ಕೊನೆಗೂ ಗುಡ್ ನ್ಯೂಸ್: ಯಾವಾಗ ಸಿಗಲಿದೆ ಗೊತ್ತಾ ಎಣ್ಣೆ?

ಬೆಳಗಾವಿ ಜಿಲ್ಲೆಯಲ್ಲಿ ದಿನೇ ದಿನೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇಷ್ಟಾದ್ರೂ ಕೂಡ ಜನರಿಗೆ ಕೊರೋನಾ ವೈರಸ್‌ ಬಗ್ಗೆ ಆತಂಣಕವೇ ಇಲ್ಲದಂತಾಗಿದೆ. ಜನರ ಈ ವರ್ತನೆಯೇ ಜಿಲ್ಲಾಡಳಿತದ ತಲೆನೋವಿಗೆ ಕಾರಣವಾಗಿದೆ.