Asianet Suvarna News Asianet Suvarna News

ಮದ್ಯ ಪ್ರಿಯರಿಗೆ ಕೊನೆಗೂ ಗುಡ್ ನ್ಯೂಸ್: ಯಾವಾಗ ಸಿಗಲಿದೆ ಗೊತ್ತಾ ಎಣ್ಣೆ?

ಕಳೆದೊಂದು ತಿಂಗಳಿನಿಂದ ಚಾತಕಪಕ್ಷಿಯಂತೆ ಎಣ್ಣೆಗಾಗಿ ಕಾದು ಕುಳಿತಿದ್ದ ಮದ್ಯ ಪ್ರಿಯರಿಗೆ ಇಂದು ಸಿಹಿ ಸುದ್ದಿ ಸಿಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ಮದ್ಯ ಮಾರಾಟಕ್ಕೆ ಅಸ್ತು ಎಂದ ಬೆನ್ನಲ್ಲೇ ರಾಜ್ಯ ಸರ್ಕಾರ ಕುಡುಕರಿಗೆ ಗುಡ್ ನ್ಯೂಸ್ ನೀಡುವ ಎಲ್ಲಾ ಸಾಧ್ಯತೆಗಳಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಮೇ.02): ಲಾಕ್‌ಡೌನ್‌ನಿಂದಾಗಿ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿತ್ತು. ಇದೀಗ ಕೇಂದ್ರ ಸರ್ಕಾರ ಮದ್ಯ ಮಾರಟ ಮಾಡಲು ಅವಕಾಶ ನೀಡಿರುವುದರಿಂದ ಮೇ 04ರಿಂದ ರಾಜ್ಯದಲ್ಲಿ ಮದ್ಯ ಮಾರಾಟ ಆರಂಭವಾಗುವ ಸಾಧ್ಯತೆಯಿದೆ.

ಶುಕ್ರವಾರವಷ್ಟೇ ಕೇಂದ್ರ ಸರ್ಕಾರ ಮೇ 17ರವರೆಗೂ ಮೂರನೇ ಹಂತದ ಲಾಕ್‌ಡೌನ್ ವಿಸ್ತರಿಸಿತ್ತು. ಮೇ.03ರಂದು ಎರಡನೇ ಹಂತದ ಲಾಕ್‌ಡೌನ್ ಮುಗಿಯಲಿದ್ದು ಆ ಬಳಿಕ ಮತ್ತೆ ಎರಡು ವಾರ ಲಾಕ್‌ಡೌನ್ ಮುಂದುವರೆಯಲಿದೆ. ಇದೇ ವೇಳೆ ಮದ್ಯ ಪ್ರಿಯರಿಗೂ ಗುಡ್ ನ್ಯೂಸ್ ನೀಡಲಾಗಿದ್ದು ಅಂಗಡಿಯಲ್ಲಿ 5ಕ್ಕಿಂತ ಹೆಚ್ಚು ಜನರಿರಬಾರದು, ಜನರ ನಡುವೆ ಆರು ಅಡಿಗಳಷ್ಟು ಅಂತರವಿರಬೇಕು ಎನ್ನುವ ಷರತ್ತನ್ನು ವಿಧಿಸಿದೆ. 

"

ಮದ್ಯ ಮಾರಾಟಕ್ಕೆ ಅನುಮತಿ: ಮತ್ತೊಂದೆಡೆ ಬ್ಯಾನ್‌ ಮಾಡುವಂತೆ ಓಡಾಡುತ್ತಿರುವ ಪತ್ರ

ಶನಿವಾರವಾದ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಭೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಲಾಕ್‌ಡೌನ್ ವಿಸ್ತರಣೆ ಬೆನ್ನಲ್ಲೇ ಬಿಎಸ್‌ವೈ ಇಂದು ಸಭೆ ನಡೆಸಲಿದ್ದಾರೆ. ವಲಯವಾರು ಮದ್ಯ ಮಾರಾಟದ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ ಮುಖ್ಯಮಂತ್ರಿಗಳು. ಇಂದು ಮದ್ಯಪ್ರಿಯರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆಯಿದೆ.