Asianet Suvarna News Asianet Suvarna News

BIG 3: ಕುಡಿಯಲು 'ಬಣ್ಣ ಬಣ್ಣದ' ನೀರು, ಜೊತೆಯಲ್ಲಿ ಹುಳು-ಹುಪ್ಪಟೆ ಕಾರುಬಾರು!

*  ಕಲುಷಿತ ನೀರು ಕುಡಿದು ಜನರು ಆಸ್ಪತ್ರೆ ಸೇರುತ್ತಿರುವ ರಾಯಚೂರು ಜನತೆ
* ಜನರ ಸಮಸ್ಯೆಗೆ ಸ್ಪಂದಿಸದ ನಗರಸಭೆ 
*  ಕಲುಷಿತ ನೀರು ಕುಡಿದು ಮೂತ್ರಪಿಂಡ ಕೆಳೆದುಕೊಂಡ ಮಂದಿ  
 

ರಾಯಚೂರು(ಜೂ.07): ಕಲುಷಿತ ನೀರು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿ ಮಕ್ಕಳು ಸೇರಿದಂತೆ ಹಲವಾರು ಮಂದಿ ಆಸ್ಒತ್ರೆ ಸೇರಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಈ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಬಿಗ್‌ 3 ಕಾರ್ಯಕ್ರಮದಲ್ಲಿ ವರದಿ ಪ್ರಸಾರವಾಗಿದೆ. ಕಳೆದೊಂದು ವಾರದಿಂದ ಇಂತಹ ಕಲುಷಿತ ನೀರು ಕುಡಿದು ಜನರು ಆಸ್ಪತ್ರೆ ಸೇರುತ್ತಿದ್ದಾರೆ. ಇಷ್ಟಾದರೂ ರಾಯಚೂರು ಮಾತ್ರ ಸ್ಪಂದಿಸುತ್ತಿಲ್ಲ. ಹೀಗಾಗಿ ಇಲ್ಲಿನ ಜನ ನಗರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕಲುಷಿತ ನೀರು ಕುಡಿದು ಹಲವಾರು ಮಂದಿ ಮೂತ್ರಪಿಂಡ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ನಗರದ ರಿಮ್ಸ್‌ ಆಸ್ಪತ್ರೆಯಲ್ಲಿ ಎಲ್ಲಿ ನೋಡಿದ್ರೂ ಬರೀ ರೋಗಿಗಳೇ ಕಾಣಿಸುತ್ತಿದ್ದಾರೆ. 

ಅಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ಎದ್ದು ನಿಂತ ಅಪ್ಪು ಪುತ್ಥಳಿ; ಕಾಲಿಗೆ ಮುತ್ತಿಟ್ಟು ರಾಘಣ್ಣ ಭಾವುಕ

Video Top Stories