Asianet Suvarna News Asianet Suvarna News

ಅಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ಎದ್ದು ನಿಂತ ಅಪ್ಪು ಪುತ್ಥಳಿ; ಕಾಲಿಗೆ ಮುತ್ತಿಟ್ಟು ರಾಘಣ್ಣ ಭಾವುಕ

ಹೊಸಪೇಟೆಯ ಅಪ್ಪು ಅಭಿಮಾನಿ ಬಳಗ ಪುನೀತ್ ಎಂದೆಂದಿಗೂ ನಮ್ಮ ಮಧ್ಯೆಯೇ ಇರಲಿ ಎಂದು 7.4 ಅಡಿ ಎತ್ತರದ ಪುತ್ಥಳಿಯನ್ನ ನಿರ್ಮಾಣ ಮಾಡಿದ್ದಾರೆ. ಹೂ ಮಳೆ ಸುರಿಸುವ ಮೂಲಕ ನಗುಮುಖದ ಅಪ್ಪು ಪುತ್ಥಳಿ ಅನಾವರಣಗೊಳಿಸಲಾಗಿದೆ.

ಎಲ್ಲೆಲ್ಲೂ ಜನ ಸಾಗರ. ಎತ್ತ ನೋಡಿದರು ಅಭಿಮಾನಿಗಳ ದಂಡು. ಎಲ್ಲರ ಮನದಲ್ಲಿ ಮನಸ್ಸಲ್ಲಿ ಅಪ್ಪು ಅಪ್ಪು ಅಪ್ಪು. ಹೌದು. ಈ ದೃಶ್ಯ ಕಂಡು ಬಂದಿದ್ದು ಹೊಸಪೇಟೆಯಲ್ಲಿ. ಎಲ್ಲರಿಗೂ ತಿಳಿದಿರುವಂತೆ ಪುನೀತ್ ಅವ್ರಿಗೆ ಹೊಸಪೇಟೆಯಲ್ಲಿ ಅತೀ ಹೆಚ್ಚು ಅಭಿಮಾನಿ ಬಳಗವಿದೆ ಇದನ್ನ ಖುದ್ದು ಅಪ್ಪು ಅವರೇ ಹೇಳಿದ್ದರು. ಅದಕ್ಕೆ ಸಾಕ್ಷಿ ಹೊಸಪೇಟೆಯಲ್ಲಿ ಅಪ್ಪು ಪುತ್ಥಳಿ ಅನಾವರಣ ವೇಳೆ ಸೇರಿದ್ದ ಜನಸಾಗರ. ಹೊಸಪೇಟೆಯ ಅಪ್ಪು ಅಭಿಮಾನಿ ಬಳಗ ಪುನೀತ್ ಎಂದೆಂದಿಗೂ ನಮ್ಮ ಮಧ್ಯೆಯೇ ಇರಲಿ ಎಂದು 7.4 ಅಡಿ ಎತ್ತರದ ಪುತ್ಥಳಿಯನ್ನ ನಿರ್ಮಾಣ ಮಾಡಿದ್ದಾರೆ. ಹೂ ಮಳೆ ಸುರಿಸುವ ಮೂಲಕ ನಗುಮುಖದ ಅಪ್ಪು ಪುತ್ಥಳಿ ಅನಾವರಣಗೊಳಿಸಲಾಗಿದೆ.

 

Video Top Stories