ಗ್ರಾ.ಪಂ ಅಧಿಕಾರಿಯ ರೌಡಿಸಂ ಬಟಾಬಯಲು..! ಅವ್ಯವಹಾರ ಪ್ರಶ್ನಿಸಿದ್ರೆ ಕೇಸ್ ಹಾಕಿಸ್ತಾನೆ ಆಸಾಮಿ

ಆ ಪಂಚಾಯತಿಯಲ್ಲಿ ಏನೇ ಅವ್ಯವಹಾರ ನಡೆದ್ರೂ ಯಾರೂ ಪ್ರಶ್ನಿಸಬಾರದು. ಹಾಗೆ ಪ್ರಶ್ನೆ ಮಾಡಿದ್ರೆ ಅಂತವರೇ ಊರು ಬಿಟ್ಟು ಓಡಿ ಹೋಗಬೇಕಾಗುತ್ತೆ. ಇದು ಅಧಿಕಾರಿಯೊಬ್ಬನ ರೌಡಿಸಂ ಕಥೆ. ಈತನ ಮಾತು ಕೇಳಿದ್ರೆ ಈತ ಪಿಡಿಓನಾ ? ಇಲ್ಲಾ ರೌಡಿನಾ ? ಅಂತ ನೀವೆ ದಂಗಾಗ್ತಿರಿ.
 

First Published Oct 27, 2023, 11:39 AM IST | Last Updated Oct 27, 2023, 11:39 AM IST

ಈತ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ. ಪಡೆಯೋದು ಸರ್ಕಾರಿ ಸಂಬಳ. ಆದ್ರೆ ಮಾಡೋದು ಮಾತ್ರ ರೌಡಿಸಂ. ಪಂಚಾಯತ್‌ನಲ್ಲಿ ಏನೇ ಅವ್ಯವಹಾರಗಳು ನಡೆಯಲಿ. ಈತ ಏನೇ ಕಾನೂನು ಬಾಹಿರ ಕೆಲಸ ಮಾಡಲಿ. ಗ್ರಾಮಸ್ಥರು ಈತನಿಗೆ ಪ್ರಶ್ನೆ ಮಾಡಬಾರದು. ಹಾಗೆ ಪ್ರಶ್ನೆ ಮಾಡಿದ್ರೆ ಅಂತವರ ಮೇಲೆಯೇ ಕೇಸ್ ಹಾಕಿಸ್ತಾನೆ ಈ ಆಸಾಮಿ. ನಾನು ಭೀಮಾ ತೀರದವನು. ಹತ್ತು ಜನರ ಮರ್ಡರ್ ಮಾಡಿದವರನ್ನೇ ಅಟ್ಟಾಡಿಸಿ ಬಂದವನು ನಾನು. ನಿನ್ನ ಮೇಲೆ ರೌಡಿ ಶೀಟರ್ ಹಾಕಿಸಬೇಕಾ ? ಅಬ್ಬಬ್ಬಾ  ಏನು ಈತನ ಅವಾಜ್.. ಈತನೇ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮದನಾ ಗ್ರಾಮ ಪಂಚಾಯತ್ ಪಿಡಿಓ ಬಸೀರ್ ಜಮಾದಾರ್. ಈ ಪಂಚಾಯತಿಯಲ್ಲಿ ಕ್ರೀಯಾ ಯೋಜನೆ ಮಾಡದೇ 80 ಲಕ್ಷ ರೂ. ಲೂಟಿ ಹೊಡೆದಿರೋ ಆರೋಪ ಈತನ ಮೇಲಿದೆ. ಈ ಬಗ್ಗೆ ಗ್ರಾಮದ ಕೆಲವರು ಸಿಇಓಗೆ ದೂರು ಕೊಟ್ಟಿದ್ದಾರೆ. ಹಾಗೆ ದೂರು ಕೊಟ್ಟ ಖಂಡೆಪ್ಪ ಎನ್ನುವಾತನಿಗೆ ಈತ ಹಾಕಿರುವ ಬೆದರಿಕೆ ಇದು. ಅಷ್ಟೇ ಅಲ್ಲ, ಅವ್ಯವಹಾರದ ಆರೋಪ ಮಾಡಿದವರ ಮೇಲೆ ಪಂಚಾಯತ್ ಹಿಂದಿ‌ನ ಅಧ್ಯಕ್ಷೆಯ ಮೂಲಕ ಅಟ್ರಾಸಿಟಿ ಕೇಸ್ ದಾಖಲಾಗುವಂತೆ ಮಾಡಿದ್ದಾನೆ ಈ ಪಿಡಿಓ. ಸರ್ಕಾರವೇ ಇಂಥವರಿಗೆ ಕುಮ್ಮಕ್ಕು ನೀಡುತ್ತಿದೆ ಅಂತ ಸಂಸದ ಉಮೇಶ ಜಾಧವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅವ್ಯವಹಾರದ ಬಗ್ಗೆ ಗ್ರಾಮಸ್ಥರು ಸಿಇಓಗೆ ದೂರು ಕೊಟ್ಟಾಗಿದೆ. ತಪ್ಪೇ ಮಾಡದಿದ್ರೆ ಧೈರ್ಯವಾಗಿ ಎದುರಿಸಬೇಕಿತ್ತು. ಅದು ಬಿಟ್ಟು ಒಬ್ಬ ಸರ್ಕಾರಿ ನೌಕರ ಎನ್ನುವುದನ್ನೂ ಮರೆತು ಪುಡಿ ರೌಡಿಯಂತೆ ಪಿಡಿಓ ಅವಾಜ್ ಹಾಕಿದ್ದು ಇಲಾಖೆಯೇ ತಲೆ ತಗ್ಗಿಸುವಂತಾಗಿದೆ. 

ಇದನ್ನೂ ವೀಕ್ಷಿಸಿ:  ಪದವಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಅಂತರ್ ಕಾಲೇಜು, ವಿವಿ ಬದಲಾವಣೆಗೆ ಅಸ್ತು